ಕುಂದಾಪುರ: ಸಾಂಗತ್ಯ (ರಿ) ಫೆಬ್ರವರಿ 16 ಮತ್ತು 17 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಚಿತ್ರ ಶಿಬಿರವನ್ನು ಹಮ್ಮಿಕೊಂಡಿದ್ದು ಚಿತ್ರ ಶಿಬಿರದಲ್ಲಿ ವಿವಿಧ ಭಾಷೆಗಳ ಚಿತ್ರಗಳ ಪ್ರದರ್ಶನ ಮತ್ತು ಚರ್ಚೆ, ಸಿನಿಮಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಉಪನ್ಯಾಸ, ಗುಂಪು ಚರ್ಚೆ ಶಿಬಿರದಲ್ಲಿ ನಡೆಯಲಿದೆ.
ಐವತ್ತು ಮಂದಿಗೆ ಮಾತ್ರ ಅವಕಾಶವಿದ್ದು, ಸಿನಿಮಾ ಮಾಧ್ಯಮವನ್ನು ಪ್ರಶಂಸೆ ಮಾಡುವ ಬಗೆ, ಸಿನಿಮಾ ಲೇಖನಗಳನ್ನು ಬರೆಯುವ ಬಗ್ಗೆಯೂ ಮಾಹಿತಿ ಒದಗಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣಪತ್ರವನ್ನು ನೀಡಲಾಗುವುದು. ಪ್ರವೇಶ ಶುಲ್ಕ ೪೦೦ ರೂ. ಗಳಿದ್ದು, ಊಟ-ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಆಸಕ್ತರು ಮಾಹಿತಿ ಮತ್ತು ನೋಂದಣಿಗೆ 94483 48517, 94818 09206, 94805 82027 ಸಂಪರ್ಕಿಸಬಹುದಾಗಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com