ಕುಂದಾಪುರ: ತಾಲೂಕಿನ ಹಲವೆಡೆ ಅಕಾಲಿಕ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೈಂದೂರು, ತಲ್ಲೂರು. ಕೊಲ್ಲೂರು, ಹಾಲಾಡಿ, ಬಿದ್ಕಲ್ಕಟ್ಟೆ, ಶಂಕರನಾರಾಯಣ, ಅಮಾಸೆಬೈಲು, ಗೋಳಿಯಂಗಡಿ ಮುಂತಾದೆಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕುಂದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಗಂಟೆ ಹೆಚ್ಚು ಮಳೆ ಸುರಿದಿದೆ.
ಅನಿರೀಕ್ಷಿತ ಮಳೆಯಿಂದಾಗಿ ಕುಂದಾಪುರದ ವಾರದ ಸಂತೆ ಅಸ್ತವ್ಯಸ್ತಗೊಂಡಿದೆ. ವ್ಯಾಪಾರಿಗಳು, ಗ್ರಾಹಕರು ತೊಂದರೆ ಅನುಭವಿಸುವಂತಾಯಿತು. ಸಂತೆ ಮಾರುಕಟ್ಟೆ ವಠಾರ, ರಸ್ತೆಯ ಇಕ್ಕೆಲಗಳಲ್ಲಿ ನೀರು ತುಂಬಿಕೊಂಡಿದೆ. ಮೋಡ ಕವಿದ ವಾತಾವರಣ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com