ಕುಂದಾಪುರ: ಹಿಂದೂ ಜಾಗರಣ ವೇದಿಕೆ ಮುಖಂಡನೊರ್ವ ಡ್ರಗ್ಸ್ ಡೀಲರ್ ಎಂದು ಸಂಜೆ ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾದುದನ್ನು ಖಂಡಿಸಿ ಹಿಂ.ಜಾ.ವೇ. ಕೋಟೇಶ್ವರ ಘಟಕ ಇಲ್ಲಿನ ಬೈಪಾಸಿನಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಇಂತಹ ವರದಿಗಳ ಮೂಲಕ ಹಿಂದೂ ಸಮಾಜವನ್ನು ಹಾಗೂ ಹಿಂದೂ ಮುಖಂಡರನ್ನು ತೇಜೋವಧೆ ಮಾಡಲಾಗುತ್ತಿದೆ. ಇಂತಹ ವರದಿಗಳು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಮಾಡುತ್ತಿದೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ಸತ್ಯ ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರು ಪತ್ರಿಕೆ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಿಂ.ಜಾ.ವೇ. ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ, ಜಿಲ್ಲಾ ಕಾರ್ಯದರ್ಶಿ ಧನಂಜಯ ಕುಂದಾಪುರ, ರಾಜೇಶ ಕೋಟೇಶ್ವರ, ಅಶೋಕ ಮಾರ್ಕೋಡು, ಸಂತೋಷ ಮಾರ್ಕೋಡು, ಗಣೇಶ, ರಮೇಶ್ ಬಂಗೇರ ಹಾಗೂ ಹಿಂ.ಜಾ.ವೇ. ಕಾರ್ಯಕರ್ತರು ಭಾಗವಹಿಸಿದ್ದರು.