ಜಗತ್ತಿನ 47 ಪ್ರಾಚೀನ ಸಂಸ್ಕೃತಿಗಳಲ್ಲಿ ಚೀನಾ ಮತ್ತು ಭಾರತದ ಸಂಸ್ಕೃತಿಗಳು ಮಾತ್ರವೇ ಉಳಿದಿವೆ. ಭಾರತವು ಇಂದು ವಿಶ್ವಕ್ಕೇ ಜಗದ್ಗುರುವಿನ ಸ್ಥಾನದಲ್ಲಿದೆ. ಇಂತಹ ಹಿರಿದಾದ ಸ್ಥಾನ ದೊರಕಿದ್ದು, ಭಾರತದ ಪ್ರಾಚೀನ ಸಂಸ್ಕೃತಿ, ಆರ್ಷವಾದ ಸನಾತನ ಧರ್ಮದಿಂದಾಗಿಯೇ ಹೊರತು ಇಲ್ಲಿನ ಶ್ರೀಮಂತಿಕೆಯಿಂದಲ್ಲ, ಅಣ್ವಸ್ತ್ರ ದಾಸ್ತಾನಿದೆ ಎಂಬುದಕ್ಕಾಗಿ ಅಲ್ಲ. ಧಾಮರ್ಿಕ ಕಾರ್ಯದಿಂದ ಮನುಕುಲದ ಅಭ್ಯುದಯವಾಗುತ್ತದೆ ಎಂಬುದನ್ನು ಭಾರತೀಯ ಸಂಸ್ಕೃತಿ ಸಾರಿಹೇಳುತ್ತದೆ ಎಂದು ಕುಂದೇಶ್ವರ ದೇವಸ್ಥಾನದ ಮೊಕ್ತೇಸರ ಡಾ. ಎಚ್. ವಿ. ನರಸಿಂಹ ಮೂರ್ತಿ ಅವರು ಹೇಳಿದರು.
ಹಕ್ಲಾಡಿ ಗ್ರಾಮದ ತೊಪ್ಲುವಿನ ಅರೆಕಲ್ಲು ಶ್ರೀನಾಗ ದೇವಸ್ಥಾನದ ದಶಮಾನೋತ್ಸವ ಮತ್ತು ವರ್ಧಂತ್ಯುತ್ಸವದ ಆಂಗವಾಗಿ ಶುಕ್ರವಾರ ಸಂಜೆ ಜರಗಿದ ಧಾಮರ್ಿಕ ಅಭೆಯ ಅಧ್ಯಕ್ಷತೆ ವಹಿಸಿ ಆವರು ಮಾತನಾಡಿದರು.
ನಾಗಾರಾಧನೆಯು ಪುರಾಣ, ಇತಿಹಾಸಪೂರ್ವದಿಂದಲೂ ಪ್ರಸಿದ್ಧವಾಗಿದೆ. ನಾಗನನ್ನು ನಿಧಿಸಂರಕ್ಷಕ, ಸಂತಾನಕಾರಕ, ಚರ್ಮರೋಗನಿವಾರಕ ಎಂಬುದಾಗಿ ನಂಬುತ್ತಾರೆ. ನಾಗ ನಮ್ಮ ಬದುಕಿಗೆ ತೀರಾ ಹತ್ತಿರವಾಗಿರುವ ದೇವರು. ಪರಶುರಾಮ ಸೃಷ್ಟಿಯ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ನಾಗಾರಾಧನೆಯ ಪ್ರಸಿದ್ಧನೆಲವಾಗಿದೆ. ಭಜನೆ, ನಾಮಸಂಕೀರ್ತನೆ, ಹೋಮಹವನ, ಶುದ್ಧಮನಸ್ಸಿನ ಭಕ್ತಿಯಿಂದ ಧರ್ಮದ ವ್ಯಾಪ್ತಿಯಲ್ಲಿ ದೇವತಾರಾಧನೆ ಮಾಡಿದಾಗ ಶಾಮತಿ-ನೆಮ್ಮದಿ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಟ್ಬೇಲ್ತೂರು ಭದ್ರಮಹಾಕಾಳಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ. ಆನಂದ ಶೆಟ್ಟಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್, ವಕೀಲ ವೈ. ಶರತ್ಕುಮಾರ್ ಶೆಟ್ಟಿ, ತಾ. ಪಂ. ಸದಸ್ಯ ಶಂಕರ ಶೆಟ್ಟಿ, ಉಪನ್ಯಾಸಕ ಕುಮಾರ ಶಂಕರನಾರಾಯಣ, ಉದ್ಯಮಿ ಸುಂದರ ಮೆಂಡನ್, ರಾಣೆಬೆನ್ನೂರು ಮಹಿಷಮರ್ದಿನಿ ಅರ್ಬನ್ ಕೋಅಪರೇಟಿವ್ ಬ್ಯಾಂಕ್ನ ಬಿ. ಎನ್. ಬಾಬು ರಾವ್, ನರಸಿಂಹ ಮೊಗವೀರ, ಮಂಗಳೂರಿನ ಮ್ಯಾಪ್ಸ್ ಕಾಲೇಜು ಚೇರ್ಮ್ಯಾನ್ ದಿನೇಶ್ ಆಳ್ವ, ದೇವಸ್ಥಾನದ ಕಾರ್ಯದಶರ್ಿ ಸಂತೋಷ್ ಎಸ್. ಎಂ, ಶೇಖರ್ ಜಿ. ಮೊಗವೀರ, ಅರ್ಚಕ ಸುಬ್ರಾಯ ಭಟ್, ಮಹೇಶ್ ಚಂದನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಮತ್ತು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಟಿ. ಕೆ. ಆನಂದ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.
ಚಂದ್ರ ಕೆ. ಹೆಮ್ಮಾಡಿ ಪ್ರಾರ್ಥಿಸಿದರು. ಉದಯಕುಮಾರ್ ಹಟ್ಟಿಯಂಗಡಿ ಆವರು ಸ್ವಾಗತಿಸಿದರು. ಸಂಜೀವ ಹೊಸಾಡು ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಚಂದನ್ ನೆಂಪು ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com