ತುಳುನಾಡ ಸಿರಿ ಮದಿಪು-2013: ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೆ

ಮೂಡುಬಿದಿರೆ: ಕೃಷಿ ಪರಂಪರೆಯ ಹಿನ್ನೆಲೆಯಿಂದ ಬೆಳೆದು ಬಂದಿರುವ ತುಳುನಾಡಿನ ಸಂಸ್ಕೃತಿ ಪರಂಪರೆ ಇಂದಿನ ಆದುನಿಕ ಶೈಲಿಯ ಜೀವನ ಪದ್ಧತಿಯಿಂದಾಗಿ ಅವನತಿ ಕಡೆಗೆ ಸಾಗುತ್ತಿದೆ. ದೇಶದ ಸಂಸ್ಕೃತಿಯಲ್ಲಿ ಶ್ರೇಷ್ಟ ಸ್ಥಾನ ಮಾನವನ್ನು ಪಡೆದ ಸಂಸ್ಕೃತಿ ಇಂದು ವಿನಾಶದಂಚಿನಲ್ಲಿದ್ದು, ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗುತ್ತಿದೆ. ನಮ್ಮ ಹಿರಿಯರು ಕೊಟ್ಟ ಈ ಶ್ರೇಷ್ಠ ಸಂಸ್ಕೃತಿಯನ್ನು ಮುಂದುರಿಸಿಕೊಂಡು ಹೋಗುವ ಹೊಣೆಗಾರಿಕೆ ಯುವಜನತೆಯ ಮೇಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮನಾಥ ಎ. ಕೋಟ್ಯಾನ್ ಹೇಳಿದರು.
       ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಕೂಟ ಮೂಡುಬಿದಿರೆ ಮತ್ತು ಮಹಾವೀರ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಮಹಾವೀರ ಕಾಲೇಜಿನಲ್ಲಿ ಬುಧವಾರ ನಡೆದ ಮಂಳೂರು ವಿಶ್ವವಿದ್ಯಾನಿಲಯ ಮಟ್ಟದ 7 ನೇ ವರ್ಷದ `ತುಳುನಾಡ ಸಿರಿ ಮದಿಪು-2013’ ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. 
       ಅಕ್ಕಿ ಎಂದರೆ ದೇವರು ಎಂಬ ಭಾವನೆಯಿದ್ದ ನಮ್ಮ ಹಿರಿಯರು ಅನ್ನಕ್ಕಾಗಿ ಕಷ್ಟಪಟ್ಟಿದ್ದರೂ ಇಂದಿನ ಯುವ ಜನಾಂಗ ಫಾಸ್ಟ್ ಫುಡ್ ಗೆ ಮಾರು ಹೋಗಿ ತಿನ್ನುವ ಅನ್ನವನ್ನು ತಾತ್ಸಾರದಿಂದ ಕಾಣುತ್ತಿದೆ ಎಂದು ಖೇದ ವ್ಯಕ್ತಪಡಿಸಿದ ಅವರು ಶಾಲಾ-ಕಾಲೇಜಿನಲ್ಲಿ ತುಳು ಸಂಘಗಳನ್ನು ಸ್ಥಾಪಿಸಿ, ತುಳು ಸಂಸ್ಕೃತಿಯನ್ನು ಶ್ರೇಷ್ಠತೆ ಸಾರುವ ಕಾರ್ಯಕ್ರಮಗಳನ್ನು ನಡೆಸಬೇಕು. ಈಗಾಗಲೇ ತುಳು ಪಠ್ಯಕ್ರಮವನ್ನು ಕೆಲವು ಶಾಲೆಗಳಲ್ಲಿ ಜಾರಿಗೆ ತಂದಿದ್ದು, ಮತ್ತಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆಯಿದೆ ಎಂದು ಹೇಳಿದರು.
      ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಭಟ್ ಮಾತನಾಡಿ, ತುಳು ಭಾಷೆಯಂತೆ ಇತರ ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ಉಳಿಸುವ ಕೆಲಸ ನಡೆಯಬೇಕು. ಇದರಿಂದ ಭಾಷೆಯು ಅಳಿಯುವುದನ್ನು ತಪ್ಪಿಸಬಹುದು ಎಂದು ಹೇಳಿದರು.
    ಸನ್ಮಾನ, ಪುಸ್ತಕ ಬಿಡುಗಡೆ: ತುಳು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಉಗ್ಗಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಉಗ್ಗಪ್ಪ ಪೂಜಾರಿ ಅವರ ` ಕಥೆಕ್ಲೆನಾ ಪೊದಿಕೆ’ ಪುಸ್ತಕ ಬಿಡುಗಡೆಗೊಳಿಸಿದರು.
     ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೂಡುಬಿದಿರೆ ಶಾಖೆಯ ಮೆನೇಜರ್ ಯೋಗಿಶ್ ಕರ್ಕೇರಾ, ತುಳುಕೂಟದ ಅಧ್ಯಕ್ಷ ಸುಭಾಶ್ಚಂದ್ರ ಪಡಿವಾಳ್, ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್. ಗೋವಿಂದಪ್ಪ, ಫ್ರೊ. ಮಧೂರು ಮೋಹನ್ ಕಲ್ಲೂರಾಯ, ವಿದ್ಯಾರ್ಥಿ ನಾಯಕ ರಕ್ಷಿತ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ, ಹಾಲಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರೊ. ಹರೀಶ್ ವಂದಿಸಿದರು. ನಳಿನಿ ನಿರೂಪಿಸಿದರು. 
      ತುಳುನಾಡಿನ ಸಿರಿ ಮದಿಪು ಕಾರ್ಯಕ್ರಮವು ವಿದ್ಯಾರ್ಥಿಗಳ ಜಾನಪದ ಕಾಳಜಿ, ತುಳನಾಡಿನ ಪರಂಪರೆ ಸಾರುವ ವಿನ್ಯಾಸ: ಸ್ವಾಗತಗೋಪುರ ವಿನ್ಯಾಸ, ಗುತ್ತಿನ ಮನೆಯ ಮಾದರಿ, ತುಳುನಾಡಿನ ಕೃಷಿ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಯಲ್ಲಿ ಪ್ರಸ್ತುತಪಡಿಸಿದ ಕೇರಳ ಶೈಲಿಯ ಚೆಂಡೆವಾದನ ಮೂಲತಃ ಉತ್ತರ ಕರ್ನಾಟಕದವರಾದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಹಾಲಾ ನಾಯ್ಕ್ ಸ್ಪಷ್ಟ ತುಳುವಿನಲ್ಲಿ ಮಾಡಿದ ಪ್ರಾಸ್ತಾವಿಕ ಭಾಷಣ ಮದಿಪುವಿನ ಆಕರ್ಷಣೆಯಾಗಿತ್ತು.

ಎಂಟು ಕಾಲೇಜುಗಳ ಭಾಗವಹಿಸುವಿಕೆ:
ವೈಯುಕ್ತಿಕ ಮತ್ತು ಸಾಮೂಹಿಕ ವಿಭಾಗದ ಸ್ಪರ್ದೆಗಳು ಆಕರ್ಷಣೀಯವಾಗಿ ನಡೆದು ಬೆಳ್ತಂಗಡಿ ಸರ್ಕಾರಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.

ಸಾಮೂಹಿಕ ವಿಭಾಗದಲ್ಲಿ ಭುವನೇಂದರ ಕಾಲೇಜು ಪ್ರಶಸ್ತಿ ಪಡೆಯಿತು.

ಮುಂಬಯಿಯ ಹೆಗ್ಡೆ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ವಿಜಯ ಹೆಗ್ಡೆ ಅವರು ಪ್ರಶಸ್ತಿ ವಿಜೇತರಿಗೆ ಬಹುಮಾಣ ನೀಡಿದರು. ಕೋಟಿ ಚೆನ್ನಯದ ಕೋಟಿ ಸುಭಾಶ್ಚಂದ್ರ ಪಡಿವಾಳ್ ಅವರು ಸಮಾರೋಪ ಭಾಷಣ ಮಾಡಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com