ಬೈಂದೂರು: ಸರ್ವಶಿಕ್ಷಾ ಯೋಜನೆಯಡಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಬೈಂದೂರಿನ ಯಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಮುದಾಯ ಜಾಗೃತಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಬಾರ್ಕೂರಿನ ರಂಗಬಸದಿ ಮಕ್ಕಳ ರಂಗಸಮೂಹ ತಂಡದಿಂದ ಗುರುರಾಜ್ ಬಾರ್ಕೂರು ನಿರ್ದೇಶನದ ಬಾವಿ ಕಳೆದಿದೆ ಎಂಬ ಕಿರುನಾಟಕ ಪ್ರದರ್ಶನಗೊಂಡಿತು. ಮಕ್ಕಳೊಂದಿಗೆ ಕಿರುತೆರೆ ನಟಿ ಚಂದ್ರಕಲಾ ಭಟ್, ನಾಟಕ ಕಲಾವಿದ ರಘು ಪಾಂಡೇಶ್ವರ ಮೊದಲಾದವರು ನಾಟಕದಲ್ಲಿ ನಟಿಸಿ ಗಮನಸೆಳೆದರು.
ಕುಂದಾಪ್ರ ಡಾಟ್ ಕಾಂ - editor@kundapra.com