ಸಮವಸ್ತ್ರ ವಿತರಣೆ ಅಭಿವೃದ್ಧಿ ಸಂಕೇತ: ರಾಜೇಂದ್ರಕುಮಾರ್


ಹೆಮ್ಮಾಡಿ:  ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣೆಯ ಹಿಂದೆ ಯಾವುದೇ ಲಾಭದ ಉದ್ದೇಶವಿಲ್ಲ. ಸಮವಸ್ತ್ರ ವಿತರಿಸುವುದು ನವೋದಯ ಸಂಸ್ಥೆಯ ಧ್ಯೇಯ ಹಾಗೂ ಸ್ವಸಹಾಯ ಗುಂಪುಗಳ ಮಹಿಳೆಯರ ಅಭಿವೃದ್ಧಿಯ ಸಂಕೇತವಾಗಿದೆ ಎಂದು ನವೋದಯ ಗ್ರಾಮವಿಕಾಸ  ಚಾರಿಟೆಬಲ್ ಟ್ರಸ್ಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರಕುಮಾರ್ ಅವರು ಹೇಳಿದರು.
        ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಶನಿವಾರ ಜರಗಿದ ನವೋದಯ ಗ್ರಾಮವಿಕಾಸ  ಚಾರಿಟೆಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರನ್ನು ಸಮಾನವಾಗಿ ಕಾಣುವ ಚಿಂತನೆಯು ನವೋದಯ ಸಂಸ್ಥೆಯ ಸಂಸ್ಕೃತಿಯಾಗಿದೆ. ವ್ಯಕ್ತಿ ಕೇವಲ ತನಗಾಗಿ ಜೀವಿಸದೇ ಸಮಾಜಕ್ಕಾಗಿ ಕಿಂಚಿತ್ ಸೇವೆ ನೀಡುವ ಮನೋಭಾವವನ್ನು ನವೋದಯ ಸ್ವಸಹಾಯ ಗುಂಪುಗಳ ಸದಸ್ಯರು ಹೊಂದಬೇಕು. ಜವಾಬ್ದಾರಿಯನ್ನು ಅರಿತ ಮಹಿಳೆಯರಿಂದ ಸಮಾಜದ ಗೌರವ ಹೆಚ್ಚುತ್ತದೆ ಎಂದ ಅವರು, ಹೆಮ್ಮಾಡಿ ಪರಿಸರದಲ್ಲಿ 215 ನವೋದಯ ಸ್ವಸಹಾಯ ಗುಂಪುಗಳಿದ್ದು, ಇದು ರಾಜ್ಯದಲ್ಲಿಯೇ ದಾಖಲೆಯಾಗಿದೆ ಎಂದು ಪ್ರಶಂಸಿದರು.
        ರಾಜಕೀಯ ಸೇರಲ್ಲ: ನವೋದಯ ಸಂಸ್ಥೆ ರಾಜಕೀಯ ಸಂಘಟನೆಯಲ್ಲ. ನವೋದಯ ಸ್ವಸಹಾಯ ಸಂಘಟನೆಯ ಮೂಲಕ ಅಭಿವೃದ್ಧಿಯತ್ತ ಸಂಘಟಿತರಾಗಿ ಸಾಗುವ ಗುರಿ ತಮ್ಮದು. ನವೋದಯದಲ್ಲಿ ಸದಸ್ಯರೇ ಸೂತ್ರಧಾರಿಗಳು ಎಂದು ಹೇಳಿದ ರಾಜೇಂದ್ರಕುಮಾರ್ ತಮಗೆ ರಾಜಕೀಯ ಸೇರಬೇಕೆಂಬ ಇರಾದೆ ಇಲ್ಲ. ಆದರೆ ಕೇವಲ ಮೊಸಳೆಕಣ್ಣೀರು ಸುರಿಸುವವರಿಗಿಂತ ಸದಾ ಅಭಿವೃದ್ಧಿ ಚಿಂತನೆ ನಡೆಸುವ ವ್ಯಕ್ತಿಗಳನ್ನು ಚುನಾಯಿಸುವಂತೆ ನವೋದಯ ಸ್ವಸಹಾಯ  ಗುಂಪುಗಳ ಸದಸ್ಯರಿಗೆ ಅವರು ಕಿವಿಮಾತು ಹೇಳಿದರು. 
         ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಾದ ಸುಮಿತ್ರಮ್ಮ, ಲಲಿತಾ ಗಾಣಿಗ, ಪಾರ್ವತಿ, ಕಾಮರ್ಿನ್ ಲೂಯಿಸ್ ಮತ್ತು ಜುಬೈದಾ ಅವರು ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದಶರ್ಿ ವೇದಮೂತರ್ಿ ಎಚ್. ರಾಮಚಂದ್ರ ಭಟ್ ಅವರು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ಸ್ತ್ರೀಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವಂತಹ ಗುರುತರ ಕಾರ್ಯವನ್ನು ನವೋದಯ ಸಂಸ್ಥೆ ಮಾಡಿದೆ. ಯೋಚನೆ, ಯೋಜನೆ ಮತ್ತು ಸಾಧನೆಗೆ ಪ್ರತಿರೂಪ ಎಂಬಂತಿರುವ ರಾಜೇಂದ್ರಕುಮಾರ್ ಅವರು ನವೋದಯ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಸಂಘಶಕ್ತಿಯನ್ನು ನಿರೂಪಿಸಿ ತೋರಿಸಿದ್ದಾರೆ ಎಂದರು. ಮಾವಿನಕಟ್ಟೆಯ ಆಲ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ ಬಿ. ಎ. ಇಸ್ಮಾಯಿಲ್ ಮದನಿ ಅವರು ಶುಭಾಶಂಸನೆಗೈದರು. 
       ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿದರ್ೇಶಕ ಬಿ. ರಘುರಾಮ ಶೆಟ್ಟಿ, ಸಹಕಾರಿ ಧುರೀಣರಾದ ಎಸ್. ವಾಸುದೇವ ಯಡಿಯಾಳ್, ಎಸ್. ದಿನಕರ ಶೆಟ್ಟಿ, ಬಾಂಡ್ಯ ಸುಧಾಕರ ಶೆಟ್ಟಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ವಿಶ್ವೇಶ್ವರ ಹೆಗಡೆ ಕೊಲ್ಲೂರು, ಹಕರ್ೂರು ಮಂಜಯ್ಯ ಶೆಟ್ಟಿ, ಚಂದ್ರ ನಾಯ್ಕ್ ಕಟ್ಬೇಲ್ತೂರು, ಆನಂದ ಪಿ. ಎಚ್. ಹೆಮ್ಮಾಡಿ, ಸಾಧು ಎಸ್. ಬಿಲ್ಲವ ಹೆಮ್ಮಾಡಿ ಉಪಸ್ಥಿತರಿದ್ದರು.
   ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿದರ್ೇಶಕ ರಾಜು ಪೂಜಾರಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಮೇಲ್ವಿಚಾರಕ ಮನೋಹರ ಶೆಟ್ಟಿ ಅವರು ವಂದಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com