ಕುಂದಾಪುರ: ಭಾರತ ಸರಕಾರದ ಗೀತೆ ಮತ್ತು ನಾಟಕ ವಿಭಾಗದ ಕಲಾವಿದರಾದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಆರೋಗ್ಯ ಜಾಗೃತಿ ಯಕ್ಷಗಾನ ಫೆ. 18 ರಿಂದ 28ರ ತನಕ ಕುಂದಾಪುರ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ.ಫೆ,18 ರಂದು ಕೋಡಿ ಮುತ್ತು ಖಾರ್ವಿಕೇರಿ, ಫೆ. 19ರಂದು ಕಟ್ಕೇರಿ ಮತ್ತು ಗೋಪಾಡಿ, ಫೆ.20 ಹುದ್ರೋಳಿ ಮತ್ತು ಕೋಟೇಶ್ವರ, ಫೆ21 ಗಂಗೊಳ್ಳಿ ಮತ್ತು ಕಂಚಿಗೋಡು, ಫೆ.23 ಬಗ್ವಾಡಿ ಮತ್ತು ಕಟ್ ಬೆಲ್ತೂರ್, ಫೆ.24 ಆನಗಳ್ಳಿ ಮತ್ತು ಉಳ್ತೂರು, ಫೆ.25 ಪಡುಕೋಣೆ ಮತ್ತು ತ್ರಾಸಿ, ಫೆ. 26 ಕೆಂಚನೂರು ಮತ್ತು ವಂಡ್ಸೆ, ಫೆ.27 ವಕ್ವಾಡಿ ಮತ್ತು ಹೆಗ್ಗಡ್ಬೈಲು, ಫೆ.28 ಮರಂತೆ ಮತ್ತು ಮೊವಾಡಿಯಲ್ಲಿ ನಡೆಯಲಿದೆ ಎಂದು ನೆಹರು ಯುವ ಕೇಂದ್ರದ ನರಸಿಂಹ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಕುಂದಾಪ್ರ ಡಾಟ್ ಕಾಂ - editor@kundapra.com