ಕುಂದಾಪುರ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಫೆ.8ರಿಂದ 10ರವರಗೆ ನಡೆಯುವ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದಲ್ಲಿ ಜಿಲ್ಲೆಯ 25 ಕೂಲಿಕಾರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಕೋಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸಮ್ಮೇಳನದಲ್ಲಿ ಭೂಮಿ ಹಕ್ಕಿನ ಹೋರಾಟ ತೀವ್ರಗೊಳಿಸುವುದು, ಈಗಾಗಲೇ ಬಡ ನಿವೇಶನ ರಹಿತರು ಸರ್ಕಾರಕ್ಕೆ ಸಲ್ಲಿಸಿದ ಶೀಘ್ರ ವಿಲೇವಾರಿಗೆ ಒತ್ತಾಯಿಸಿ ಹೋರಾಟ ಚಳುವಳಿಯನ್ನು ರೂಪಿಸಲಾಗುವುದು. ಅನಧಿಕೃತವಾಗಿ ಅತಿಕ್ರಮಣ ಮಾಡಿರುವ ಸರ್ಕಾರಿ ಜಮೀನನ್ನು ಸಕ್ರಮಗೊಳಿಸಲು ಸಮ್ಮೇಳನದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com