ಕುಂದಾಪುರ: ನಗರದ ಬೀದಿಗಳಲ್ಲಿ ಮಾನಸಿಕ ಅಸ್ವಸ್ಥಗೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಮಂಗಳೂರಿನ ಸ್ನೇಹಾಲಯ ಅನಾಶ್ರಮದ ಕಾರ್ಯಕರ್ತರು ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.
ಶಾಸ್ತ್ಸೀ ವೃತ್ತದ ವಿದ್ಯುತ್ ಕಂಬಕ್ಕೆ ಆತು ನಿಂತು ದಿನ ಕಳೆಯುತ್ತಿದ್ದ ವ್ಯಕ್ತಿ ಹಾಗೂ ಅಲ್ಲಲ್ಲಿ ಚಿಂದಿ ಆಯುತ್ತಿದ್ದ ಮಹಿಳೆಯೊರ್ವಳನ್ನು ಕಂಡ ಬಳ್ಕೂರು ನಿವಾಸಿ ಪ್ರಮೀಳಾ ಡಿಸೋಜಾ, ಲಿನಾ ಮತ್ತು ಮರ್ಸಿ ಮಂಗಳೂರಿನ ಸ್ನೇಹಾಲುದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದರು.
ಸ್ನೇಹಾಲಯದ ಮುಖ್ಯಸ್ಥ ಬ್ರದರ್ ಜೋಸೆಫ್ ಇರ್ವರಿಗೂ ರಕ್ಷಣೆ ಹಾಗೂ ಚಿಕೆತ್ಸೆ ನಿಡಲು ಒಪ್ಪಿದ್ದು ಅಸ್ಥರನ್ನು ಕರೆದೊಯ್ದಿದ್ದಾರೆ.
ಪೋಟೋ: ಸಿಲ್ವಸ್ಟರ್ ಡಿಸೋಜಾ
ಕುಂದಾಪ್ರ ಡಾಟ್ ಕಾಂ - editor@kundapra.com