ಕುಂದಾಪುರ: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಗುಡ್ಡಟ್ಟು ಶ್ರೀ ವಿನಾಯಕ ಸನ್ನಿಧಿಯಲ್ಲಿ ಮಾ 1 ರ ಶುಕ್ರವಾರ ಸಂಕಷ್ಟಹರ ಚತುರ್ಥಿಯಂದು ಶ್ರೀ ದೇವರ ವಾರ್ಷಿಕೋತ್ಸವ ನಡೆಯಲಿದೆ. ಇದರ ಅಂಗವಾಗಿ ಅಂದು 1111 ತೆಂಗಿನ ಕಾಯಿ ಗಣಹೋಮ, ಬ್ರಹ್ಮಕಲಶಾಭಿಷೇಕ, ವೀಶೇಷ ಆಯುರ್ಕೊಡ ಸೇವೆ ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಲಿವೆ.
ಶುಕ್ರವಾರ ಸಂಜೆ ೫ ಗಂಟೆಗೆ ನೂತನ ವಸತಿಗೃಹದ ಉದ್ಘಾಟನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯುlid. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ವಸತಿಗೃಹವನ್ನು ಉದ್ಘಾಟಿಸಿ ಸುವರು. ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತಿರಿರುವರು. ಜ್ಯೋತಿಷ್ಯ ವಿದ್ವಾನ್ ತಟ್ಟುವಟ್ಟು ವಾಸುದೇವ ಜೊಯಿಸರು ಧಾರ್ಮಿಕ ಪ್ರವಚನಗೈಯುವರು. ಸಂಜೆ ೬.೩೦ ರಿಂದ ಬೆಂಗಳೂರು ಯಕ್ಷಗಾನ ತಂಡ ಕಲಾವಿದರಿಂದ ‘ಯಕ್ಷ ಸಿಂಚನ’, ರಾತ್ರಿ ೯.೩೦ ಕ್ಕೆ ಸಂಕಷ್ಟಹರ ಚತುರ್ಥಿ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com