
ಕುಂದಾಪುರ ತಾಲೂಕು ಮರ್ಚಂಟ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಪದ್ಮಾವತಿ ಸಭಾಂಗಣದಲ್ಲಿ ಏರ್ಪಡಿಸಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಧೇಯಕ - 2006 ಮಾಹಿತಿ ಕಾರ್ಯಾಗಾರದಲ್ಲಿ ಹೊಸ ಕಾಯಿದೆಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಳಕೆದಾರರಿಗೆ ಗುಣಮಟ್ಟದ ಆಹಾರ ಪಾನೀಯಗಳನ್ನು ದೊರಕಿಸುವ ಉದ್ದೇಶದಿಂದ ಸರಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಧೇಯಕ- 2006ನ್ನು ದೇಶಾದ್ಯಂತ ಜಾರಿಗೊಳಿಸಿದೆ. ಏಕರೂಪದ ಆಹಾರ ನಿಯಮದಿಂದ ಅಂತಾರಾಷ್ಟ್ರೀಯ ಮಾನದಂಡಗಳೊಂದಿಗೆ ಭಾರತೀಯ ಆಹಾರ ಗುಣಮಟ್ಟವನ್ನು ಹೊಂದಿಸಲಾಗುವುದು. ಇಂದು ಅವಸರ ಮತ್ತು ಫ್ಯಾಶನ್ಗಳಿಂದಾಗಿ ಸಿದ್ಧ ಆಹಾರಗಳನ್ನು ಬಳಸುವುದು ಜಾಸ್ತಿಯಾಗಿದೆ. ಪರಿಸ್ಥಿತಿಯ ದುರ್ಲಾಭ ಪಡೆಯುವ ಆಹಾರ ಉತ್ಪಾದಕರು ಸುಳ್ಳು ಜಾಹೀರಾತು ಮತ್ತು ಅಸುರಕ್ಷಿತ ಕ್ರಮಗಳಿಂದ ಜನರ ಆರೋಗ್ಯ ಕೆಡುತ್ತಿದೆ. ದೇಶದಲ್ಲಿ ವಾರ್ಷಿಕ ಎರಡು ಲಕ್ಷಕ್ಕೂ ಹೆಚ್ಚು ಜನ ಅತಿಸಾರದಿಂದ ಸಾಯುತ್ತಿದ್ದಾರೆ. ಮಕ್ಕಳು ಇದಕ್ಕೆ ಬಲಿಯಾಗುವುದು ಜಾಸ್ತಿ. ಕ್ಯಾನ್ಸರ್ ಮತ್ತು ಹದ್ರೋಗಗಳೂ ಹೆಚ್ಚಿವೆ. ಈ ಅವ್ಯವಸ್ಥೆಯನ್ನು ತಪ್ಪಿಸುವ ಉದ್ದೇಶದಿಂದ ಈ ಹಿಂದೆ ದೇಶದಲ್ಲಿ ಆಹಾರಕ್ಕೆ ಸಂಬಂಧಪಟ್ಟಂತೆ ಇದ್ದ ಎಲ್ಲಾ ವಿಧೇಯಕಗಳನ್ನು ಹೊಸ ವಿಧೇಯಕದಡಿ ಏಕೀಕರಣಗೊಳಿಸಲಾಗಿದೆ. ಆಹಾರ ಉದ್ದಿಮೆದಾರರು ಕಟ್ಟುನಿಟ್ಟಾಗಿ ಈ ಹೊಸ ಕಾಯಿದೆಯನ್ನು ಪಾಲಿಸಬೇಕು ಎಂದ ಅವರು, ಶಾಲೆಗಳ ಅಕ್ಷರದಾಸೋಹ ಬಿಸಿಯೂಟವನ್ನು ಈ ಕಾಯಿದೆಯಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಹಿರಿಯ ಆಹಾರ ಸುರಕ್ಷಣಾಧಿಕಾರಿ ನರಸಿಂಹ ಹೆಬ್ಬಾರ್ ನೂತನ ವಿಧೇಯಕ ಬಗೆಗಿನ ಕೆಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ಸುಮಂಗಲಾ ಕಾಮತ್ ಮತ್ತು ಸ್ನೇಹಾ ಪೆ ಪ್ರಾರ್ಥಿಸಿದರು.ಕುಂದಾಪುರ ತಾಲೂಕು ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಎಚ್. ಸುಬ್ರಾಯ ಹಾಲಂಬಿ ಸ್ವಾಗತಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಶಂಕರ್ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಸೋಸಿಯೇಶನ್ನ ರಾಮಚಂದ್ರ ಪ್ರಭು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com