ಕೋಟ: ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸೃತಿ ಇಲಾಖೆ, ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮದ ಅಂಗವಾಗಿ ಕೋಟದ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಚ್ ಶ್ರೀಧರ ಹಂದೆ ಮತ್ತು ಬಳಗದವರಿಂದ ಗಮಕ ಸಂವಾದ ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು.
ಕುಮಾರವ್ಯಾಸ ಭಾರತದ ಕರ್ಣಭೇದ ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೂಡಿ ಬರುವ ಗಮಕ-ವ್ಯಾಖ್ಯಾನಗಳಿಗಿಂತ ಭಿನ್ನವಾಗಿ ಗಮಕ ರೂಪಕವಾಗಿ ಪ್ರಸ್ತುತಪಡಿಸಲಾಯಿತು. ಕವಿಯ ಮಾತುಗಳನ್ನು ಉಪನ್ಯಾಸಕ ಸುಜಯೀಂದ್ರ ಹಂದೆ, ಕರ್ಣನಾಗಿ ಗಾಯಕ ಚಂದ್ರಶೇಖರ ಕೆದ್ಲಾಯ, ಕೃಷ್ಣನಾಗಿ ಶ್ರೀಧರ ಹಂದೆ, ಕುಂತಿಯಾಗಿ ಉಪನ್ಯಾಸಕ ಸದಾಶಿವ ಹೊಳ್ಳ ಗಮಕ ವಾಚನ ಮಾಡಿದರು. ಗದುಗು ಭಾರತದ ಮಂಗಳಾಚರಣೆಯ ಪದ್ಯದೊಂದಿಗೆ ಆರಂಭದಲ್ಲಿ ವಿದ್ಯಾರ್ಥಿಗಳಿಗಾಗಿ, ಗಮಕ ಕಲೆಯ ಹುಟ್ಟು-ಬೆಳವಣಿಗೆಯ ಕುರಿತಂತೆ ವಿವರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಂ. ರಾಮದೇವ ಐತಾಳ ಗಮಕಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಅಧ್ಯಾಪಕರಾದ ವಿಶ್ವೇಶ್ವರ ಹಂದೆ, ನೀರಜ, ಗ್ರೇಸೀ ಲೋಬೊ, ವಿನಿತ ಎಸ್, ಚಂದ್ರಕಲಾ, ವನಜ ಅತಿಥಿಗಳನ್ನು ಗೌರವಿಸಿದರು. ಗೀತ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com