ಗಂಗೊಳ್ಳಿ: ಗಂಗೊಳ್ಳಿಯ ಬಂದರ್ ರಸ್ತೆಯಲ್ಲಿರುವ ಶ್ರೀ ಪಂಜುರ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಡೆಸಲು ಉದ್ದೇಶಿಸಿರುವ ದೈವಸ್ಥಾನದ ಜೀಣರ್ೋದ್ಧಾರ ಕಾರ್ಯಕ್ಕೆ ದೇವಳದ ಆಡಳಿತ ಮೊಕ್ತೇಸರ ಜಿ.ಪುರುಷೋತ್ತಮ ಆರ್ಕಾಟಿ ಶಿಲಾನ್ಯಾಸ ನೆರವೇರಿಸಿದರು. ಕೊರ್ಗ ಶ್ರೀಪುರಂನ ದೈವಜ್ಞ ನಾಗೇಶ್ವರ ಮಂಜ ಆಶೀರ್ವಚನ ನೀಡಿದರು. ದೈವಸ್ಥಾನದ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ರಾಘವೇಂದ್ರ ಆರ್.ಭಂಡಾರ್ಕಾರ್, ಅರ್ಚಕ ಬಾಬು ಬಿಲ್ಲವ, ಬಚ್ಚ ಮೊಗವೀರ, ನಾರಾಯಣ ಪೂಜಾರಿ, ಮಾಧವ ಬೋರ್ಕರ್, ಸೌಪರ್ಣಿಕ ಬಸವ ಖಾರ್ವಿ, ನಾರಾಯಣ ಖಾರ್ವಿ, ನರಸಿಂಹ ಖಾರ್ವಿ ಮಂತಿ ಶೇಷ ಖಾರ್ವಿ ಮಂತಿ ಸುರೇಶ ಖಾರ್ವಿ ಗಣೇಶ ಪಿ., ರಾಮ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com