ಸಂವಹನ ಕೌಶಲ ವೃತ್ತಿಯ ಯಶಸ್ಸಿಗೆ ಅಗತ್ಯ: ಮಧುಸೂದನ್

ಬೈಂದೂರು: ಹಿತಮಿತವಾದ ಮಾತುಗಾರಿಕೆ, ಸಂದರ್ಭಕ್ಕೆ ಸೂಕ್ತವಾಗಿ ಬಳಸಲಾಗುವ ಸಂವಹನ ಕೌಶಲ ವೃತ್ತಿಯ ಯಶಸ್ಸಿಗೆ ಅಗತ್ಯವೆನಿಸುವ ಒಂದು ಪ್ರಮುಖ ಅಂಶ. ಮಾತು ಆಡುವಾಗ `ಸಜ್ಜನರಿಗೆ ಹಿತವಾವಾಗಿರಬೇಕು' ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದು ಉಡುಪಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂದನ ಭಟ್ ಹೇಳಿದರು.
      ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ಮೂರು ದಿನಗಳ ವೃತ್ತಿ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
   `ಮಾತು ಮಾಣಿಕ್ಯ, ಮಾತಿಗೆ ಬದುಕಿಸುವ ಮತ್ತು ಸಾಯಿಸುವ ಶಕ್ತಿಯಿದೆ' ಎಂಬ ಹಿರಿಯರ ಅನುಭವದ ಮಾತು ಮಾತುಗಾರಿಕೆಯ ಮಹತ್ವವನ್ನು ಸಾರುತ್ತವೆ ಎಂದರು.
    ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಚ್.ಸಯೀದಾ ಬಾನು ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಸಂಯೋಜಕ ಡಾ.ಉಮೇಶ ಮಯ್ಯ ತರಬೇತಿಯ ಉದ್ದೇಶ ವಿವರಿಸಿದರು. ಸುವರ್ಣ ಶೆಟ್ಟಿ ಸ್ವಾಗತಿಸಿ, ನಾಗರತ್ನ ವಂದಿಸಿದರು.
   ರಮ್ಯಾ ಜೈನ್ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಪವನ್‌ಕುಮಾರ್, ಕಿಶನ್‌ಕುಮಾರ್, ಮಂಜುನಾಥ, ಸಂಪನ್ಮೂಲ ವ್ಯಕ್ತಿ ಪ್ರೊ.ಎ.ಸಿ.ತುಂಗ ಇದ್ದರು.

ಮುಂದಿನ ಮೂರು ದಿನ ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಸಿ.ತುಂಗ `ಗುರಿ ನಿಗದಿ ಮತ್ತು ಸಾಧನೆ, ಪದವಿ ಬಳಿಕ ಉದ್ಯೋಗಾವಕಾಶಗಳು', ಬೈಂದೂರು ವಿಶೇಷ ತಹಸಿಲ್ದಾರ್ ರಾಜು ಮೊಗವೀರ `ಐಎಎಸ್, ಕೆಎಎಸ್ ಪರೀಕ್ಷಾ ತಯಾರಿ', ಪ್ರೊ.ನಿರ್ಮಲಾ `ಕಾನೂನು ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು', ಪ್ರೊ. ಸುಬ್ರಹ್ಮಣ್ಯಂ `ಸಂದರ್ಶನ ಎದುರಿಸುವಿಕೆ, ಡಾ.ಉಮೇಶ ಮಯ್ಯ `ಸಿಎ, ಐಸಿಡಬ್ಲ್ಯುಎ, ಸಿಎಸ್ ಶಿಕ್ಷಣದ ಬಳಿಕ ಉದ್ಯೋಗಾವಕಾಶಗಳು' ಡಾ.ನಾರಾಯಣ `ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಾವಕಾಶಗಳು' ಹಾಗೂ ಬಿ.ಆರ್.ಅಡಿಗ ಸ್ವ ಉದ್ಯೋಗಾವ ಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು.ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com