ಶಿಕ್ಷಣ ಪ್ರೇಮಿ ಶೇಷಗಿರಿ ಗೋಟರಿಗೆ ನಮ್ಮೂರ ಪ್ರಶಸ್ತಿ ಪ್ರದಾನ


ಬೀಜಾಡಿ ಮಿತ್ರ ಸಂಗಮದ 16ನೇ ವಾರ್ಷಿಕೋತ್ಸವ

ಕುಂದಾಪುರ: ಸಂಘ ಸಂಸ್ಥೆಗಳು ಮೂಲಕ ಒಂದಷ್ಟು ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಆ ಊರು ಅಭಿವೃದ್ದಿಗೊಳ್ಳಲು ಸಾಧ್ಯವಿದೆ.  ಸಂಘ ಸಂಸ್ಥೆಗಳ ಮೂಲಕ ಒಂದಷ್ಟು ಶಿಕ್ಷಣ ವಂಚಿತರಿಗೆ, ಅಶಕ್ತರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬಹುದಾಗಿದೆ. ಸಮಾಜ ಸೇವೆಯ ಮೂಲಕ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ ರಾವ್ ಶಿವಪುರ ಹೇಳಿದರು. ಅವರು ಶನಿವಾರ ಬೀಜಾಡಿ ಮೂಡು ಶಾಲಾ ಬಯಲು ರಂಗ ಮಂಟಪದಲ್ಲಿ ಜರುಗಿದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರ ಸಂಗಮ 16ನೇ ವಾಷರ್ಿಕೋತ್ಸವ ಸಮಾರಂಭದಲ್ಲಿ  ಶಿಕ್ಷಣ ಪ್ರೇಮಿ ಶೇಷಗಿರಿ ಗೋಟರವರಿಗೆ ಸಂಸ್ಥೆ ಕೊಡಮಾಡಿದ ನಮ್ಮೂರ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.  ಸಮಾರಂಭದ  ಅಧ್ಯಕ್ಷತೆಯನ್ನು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ ವಹಿಸಿದ್ದರು. ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹೆಚ್.ಪದ್ಮನಾಭ ಅಡಿಗ ಶುಭಶಂಸನೆಗೈದರು. ನಮ್ಮೂರ ಪ್ರಶಸ್ತಿ ಸ್ವೀಕರಿಸಿ ಬಿ.  ಶೇಷಗಿರಿ ಗೋಟ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪದೋನ್ನತಿ ಹೊಂದಿದ ಶಿಕ್ಷಕ ರಾಘವೇಂದ್ರ ದೇವಾಡಿಗ, ಹಿರಿಯ ರಂಗಕಮರ್ಮಿ ಸಂಜೀವ ಕದ್ರಿಕಟ್ಟು ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ವೇದಿಕೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜ ಹೆಬ್ಬಾರ್ ಉಪಸ್ಥಿತರಿದ್ದರು.  ವೆಂಕಟೇಶ ಗಾಣಿಗ, ಆರ್.ಜೆ. ರಾಘವೇಂದ್ರ, ನಾಗೇಂದ್ರ ಆಚಾರ್ಯ, ಅರುಣ್ ದೇವಾಡಿಗ, ವಿಜಯ ಆಚಾರ್ ಅವರನ್ನು ಸಂಸ್ಥೆಯ ನೂತನ ಸದಸ್ಯರಾಗಿ ಸೇರ್ಪಡೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್ ಸ್ವಾಗತಿಸಿದರು. ಕಾರ್ಯದಶರ್ಿ ರಾಜೇಶ್ ಆಚಾರ್ ವರದಿ ವಾಚಿಸಿದರು. ಚಂದ್ರ ಬಿ.ಎನ್ ಸಂದೇಶ ವಾಚಿಸಿದರು. ಶ್ರೀಕಾಂತ್ ಭಟ್, ಗಿರೀಶ್ ಕೆ.ಎಸ್ ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರೀನಿಧಿ ಭಟ್ ಸನ್ಮಾನ ಪತ್ರ ಓದಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾಥರ್ಿಗಳಿಂದ ವಿವಿಧ ವಿನೋದಾವಳಿಗಳು, ಸಂಸ್ಥೆಯ ಸದಸ್ಯರಿಂದ ಸಂಜೀವ ಕದ್ರಿಕಟ್ಟು ನಿದರ್ೇಶನದ ಪ್ರೀತಿ ಚಿಗುರಿತು ನಾಟಕ ಪ್ರದರ್ಶನಗೊಂಡಿತು.
ಫೋಟೋ:(17ಸಿಬಿ4) ಶನಿವಾರ ಬೀಜಾಡಿ ಮಿತ್ರ ಸಂಗಮದ 16ನೇ ವಾಷರ್ಷಿಕೋತ್ಸವದ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಬಿ.ಶೇಷಗಿರಿ ಗೋಟರಿಗೆ ನಮ್ಮೂರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.  
 ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com