ಎರಡೂ ಕಿಡ್ನಿ ವೈಫಲ್ಯ ನೆರವಿಗೆ ಮನವಿ


ಬೈಂದೂರು: ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಿರಿಮಂಜೇಶ್ವರ ಗ್ರಾಮದ ಅಗಸ್ತೇಶ್ವರ ಕಾಲನಿ ನಿವಾಸಿ ವೆಂಕಟ ಅವರ ಪುತ್ರ ಲಿಂಗೇಶ್ವರ(27) ಅವರು ಉಡುಪಿಯ ಗಾಂಧಿ ಆಸ್ಪತ್ರೆ ವೈದ್ಯರ ಸಲಹೆಯಂತೆ ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು ಆರ್ಥಿಕವಾಗಿ ತೀರಾ ಬಡಕುಟುಂಬದವರಾದ ಅವರಿಗೆ ಉದಾರ ದಾನಿಗಳ ಅಮೂಲ್ಯವಾದ ಮಾನವೀಯ ನೆರವಿನ ಹಸ್ತದ ಅಗತ್ಯವಿದೆ.
   ಸೆಂಟ್ರಿಂಗ್ ಕೆಲಸವನ್ನು ಮಾಡಿಕೊಂಡು ಕುಟುಂಬಕ್ಕೆ ತಮ್ಮ ಪುಟ್ಟ ಆಧಾರವಾಗಿದ್ದ ಲಿಂಗೇಶ್ವರ ಅವರು ಅವಿವಾಹಿತರಾಗಿದ್ದು, ಕಳೆದ ಐದು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದರಿಂದ ಕೆಲಸಕಾರ್ಯ ಮಾಡಲು ಆಗುತ್ತಿಲ್ಲ. ಮಗನ ಕಷ್ಟಕ್ಕೆ ಕಣ್ಣೀರು ಮಿಡಿಯುವ ತಂದೆ-ತಾಯಿ ಇದ್ದಬದ್ದ ಹಣವನ್ನು ಒಟ್ಟುಗೂಡಿಸಿ ಮಗನ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. 
   ಆದರೆ ಪ್ರತೀ ವಾರಕ್ಕೆರಡು ಬಾರಿ ತಪ್ಪದೇ ಡಯಾಲಿಸಿಸ್ ಮಾಡಿಸಬೇಕಾಗಿರುವುದರಿಂದ ಅದಕ್ಕೆ ತಗಲುವ 15 ಸಾವಿರ ರೂಪಾಯಿಗಳಿಗೂ ಅಧಿಕ ವೆಚ್ಚವನ್ನು ಭರಿಸುವುದು ಲಿಂಗೇಶ್ವರ ಅವರಿಗೂ ಹಾಗೂ ಅವರ ಕುಟುಂಬಕ್ಕೂ ತೀರಾ ಕಷ್ಟದಾಯಕವಾಗಿದೆ. ಲಿಂಗೇಶ್ವರ ಅವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ನೆರವಾಗಬಯಸುವವರು ಕರ್ಣಾಟಕ ಬ್ಯಾಂಕಿನ ಕಿರಿಮಂಜೇಶ್ವರ ಶಾಖೆಯ ಉಳಿತಾಯ ಖಾತೆ ಸಂಖ್ಯೆ 4222500100848701ಕ್ಕೆ ಸಲ್ಲಿಸಬಹುದು.  


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com