ಶಿಕ್ಷಣ ಪ್ರೇಮಿ ಶೇಷಗಿರಿ ಗೋಟರಿಗೆ ನಮ್ಮೂರ ಪ್ರಶಸ್ತಿ


ಕುಂದಾಪುರ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಬೀಜಾಡಿ-ಗೋಪಾಡಿ ಮಿತ್ರ ಸಂಗಮ ಕೊಡಮಾಡುವ ನಮ್ಮೂರ ಪ್ರಶಸ್ತಿಗೆ ಶಿಕ್ಷಣ ಪ್ರೇಮಿ, ಕೃಷಿಕ ಬಿ.ಶೇಷಗಿರಿ ಗೋಟ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಾಹಿತಿ ಜಿ.ಕೆ ಐತಾಳ್, ಯಕ್ಷಗಾನ ಗುರು ಐರೋಡಿ ರಾಮ ಗಾಣಿಗ, ಆಯುರ್ವೇದ ರತ್ನ ಡಾ.ದಿ.ಕರುಣಾಕರ ನಂಬಿಯಾರ, ಶೈಕ್ಷಣಿಕ ಕ್ಷೇತ್ರದ ಮಹಾದಾನಿ ಬಿ.ಎಂ ರಾಮಕೃಷ್ಣ ಹತ್ವಾರ್, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ ಮಯ್ಯ ಸಹಿತ 15 ಮಂದಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಶೇಷಗಿರಿ ಗೋಟರ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 
       ಫೆ.16ರಂದು ಶನಿವಾರ ರಾತ್ರಿ 7.30ಕ್ಕೆ ಬೀಜಾಡಿ ಮೂಡು ಶಾಲಾ ಬಯಲು ರಂಗ ಮಂಟಪದಲ್ಲಿ ಸಂಸ್ಥೆಯ 16ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾರಂಭದ  ಅಧ್ಯಕ್ಷತೆಯನ್ನು ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ ರಾವ್ ಶಿವಪುರ ಆಗಮಿಸಲಿದ್ದಾರೆ. ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹೆಚ್. ಪದ್ಮನಾಭ ಅಡಿಗ ಶುಭಶಂಸನೆಗೈಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಸಂಸ್ಥೆಯ ಸದಸ್ಯರಿಂದ ಸಂಜೀವ ಕದ್ರಿಕಟ್ಟು ನಿರ್ದೇಶನದ ಪ್ರೀತಿ ಚಿಗುರಿತು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅನುಪ್ ಕುಮಾರ್ ಬಿ.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com