ಮರವಂತೆ ಮಕ್ಕಳ ಗ್ರಾಮಸಭೆ


ಮರವಂತೆ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಸಾಲಿನ ಮಕ್ಕಳ ಗ್ರಾಮಸಭೆ ಪಂಚಾಯತ್ ಕಾಯರ್ಾಲಯದ ಸಮೀಪ ಕಡಲತೀರದ ಮುಕ್ತ ವಾತಾವರಣದಲ್ಲಿ ನಡೆಯಿತು. ಪ್ರೌಢಶಾಲೆ, ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಂದ ಮಕ್ಕಳು ಶಿಕ್ಷಕರ ನೇತೃತ್ವದಲ್ಲಿ ತಮ್ಮ ಹಕ್ಕುಗಳು ಮತ್ತು ಬೇಡಿಕೆಗಳ ಕುರಿತು ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಸಭಾಸ್ಥಳಕ್ಕೆ ಆಗಮಿಸಿದರು. 
      ಕರಾವಳಿ ಕಿರಿಯ ಪ್ರಾಥಮಿಕ ಶಾಲೆಯ ಹಷರ್ಿತಾ, ಪೂರ್ವ ಕಿರಿಯ ಪ್ರಾಥಮಿಕ ಶಾಲೆಯ ತೇಜಸ್, ಹಿರಿಯ ಪ್ರಾಥಮಿಕ ಶಾಲೆಯ ನಿಷಾಂತ್, ಪ್ರೌಢಶಾಲೆಯ ಅಂಬಿಕಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ಎ. ಸುಗುಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಮಕ್ಕಳ ಗ್ರಾಮಸಭೆಯ ಅಗತ್ಯ, ಔಚಿತ್ಯಗಳನ್ನು ವಿವರಿಸಿ 'ಮಕ್ಕಳು ಇಂದೇ ಪ್ರಜೆಗಳು' ಎಂಬ ಈ ಕಾಲದ ನಿಲುವಿಗೆ ಅದು ಹೇಗೆ ಪೂರಕವಾಗಿದೆ ಎನ್ನುವುದನ್ನು ವಿವರಿಸಿದರು. 
     ಪ್ರತೀ ಶಾಲೆಯ ಮಕ್ಕಳು ಗ್ರಾಮದ ಅಧ್ಯಯನ ನಡೆಸಿ ಕ್ರೋಢೀಕರಿಸಿದ ಕುಂದುಕೊರತೆ, ಬೇಡಿಕೆಗಳಿಂದ ಕೂಡಿದ ಪೆಟ್ಟಿಗೆಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಒಪ್ಪಿಸಿದರು. ಪ್ರೌಢಶಾಲೆಯ ವಿದ್ಯಾಥರ್ಿ ಸಾಯಿನಾಥ್, ಪೂರ್ವ ಶಾಲೆಯ ಕೀತರ್ಿ, ಹಿರಿಯ ಪ್ರಾಥಮಿಕ ಶಾಲೆಯ ಕಿಶನ್, ಕರಾವಳಿ ಶಾಲೆಯ ಹಷರ್ಿತಾ ಕುಂದುಕೊರತೆ, ಬೇಡಿಕೆಗಳ ಪಟ್ಟಯನ್ನು ಓದಿದರು. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳು ಶಿಕ್ಷಣದ ಹಕ್ಕು, ಬಾಲ್ಯ ವಿವಾಹ ಮತ್ತು ಲಿಂಗ ತಾರತಮ್ಯ ವಿರೋಧಿ ಸಂದೇಶ ಸಾರುವ ಬೀದಿ ನಾಟಕ ಪ್ರದಶರ್ಿಸಿದರು. 
     ಪ್ರೌಢಶಾಲೆಯ ವಿದ್ಯಾಲಕ್ಷ್ಮೀ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಹರೀಶಕುಮಾರ ಶೆಟ್ಟಿ ಕಳೆದ ಸಭೆಯ ಬೇಡಿಕೆಗಳ ಮೇಲಣ ಅನುಪಾಲನಾ ವರದಿ ಮಂಡಿಸಿದರು. ಪ್ರೌಢಶಾಲೆಯ ಕೀರ್ತನ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ. ಹಿ. ಪ್ರಾ. ಶಾಲೆಯ ಅಕ್ಷತಾ ವಂದಿಸಿದರು. 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com