ಕುಂದಾಪುರ: ಎರ್ನಾಕುಲಂನಿಂದ ದಿಲ್ಲಿಗೆ ಹಾಗೂ ದಿಲ್ಲಿಯಿಂದ ಎರ್ನಾಕುಲಂಗೆ ಪಯಣಿಸುವ ಮಂಗಳಾ ಲಕ್ಷದ್ವೀಪ ರೈಲಿಗೆ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದೆ.
ಬೆಳಗ್ಗೆ 9.20ಕ್ಕೆ ದಿಲ್ಲಿಯಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.30ಕ್ಕೆ ಮುಂಬಯಿ ತಲುಪಿ, ಸಂಜೆ 7.35ಕ್ಕೆ ಗೋವಾಕ್ಕೆ ಬಂದು, ರಾತ್ರಿ 10.38ಕ್ಕೆ ಕುಂದಾಪುರ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 1.15ಕ್ಕೆ ಎರ್ನಾಕುಲಂನಿಂದ ಹೊರಡುವ ರೈಲು ರಾತ್ರಿ 11.38ಕ್ಕೆ ಕುಂದಾಪುರಕ್ಕೆ ಬಂದು ಮರುದಿನ ಮಧ್ಯಾಹ್ನ 1.45ಕ್ಕೆ ಮುಂಬಯಿ, ನಾಸಿಕ್ಗೆ 4.35ಕ್ಕೆ ಮತ್ತು ಮಾನಮಾಂಡ ಶಿರ್ಡಿ ಜಂಕ್ಷನ್ಗೆ ಸಂಜೆ 5.37ಕ್ಕೆ ತಲುಪಲಿದೆ.
ಮರುದಿನ ಬೆಳಗ್ಗೆ 10 ಗಂಟೆಗೆ ಆಗ್ರಾ, 11 ಗಂಟೆಗೆ ಮಥುರಾ ತಲುಪಿ 1.10ಕ್ಕೆ ದಿಲ್ಲಿಗೆ ತಲುಪಲಿದೆ. ಉತ್ತರ ಭಾರತಕ್ಕೆ ಹೋಗುವ ಯಾತ್ರಾರ್ಥಿಗಳು, ಗೋವಾ ಮತ್ತು ಮುಂಬಯಿ ಪ್ರಯಾಣಿಕರು ಕಡಿಮೆ ವೆಚ್ಚದ ರೈಲು ಪ್ರಯಾಣದ ಸದುಪಯೋಗ ಪಡೆಯಬಹುದಾಗಿದೆ. ಕುಂದಾಪುರದ ಮುಖ್ಯ ಅಂಚೆ ಕಚೇರಿಯಲ್ಲಿ ರೈಲು ಪ್ರಯಾಣದ ರಿಸರ್ವೇಶನ್ ಕೌಂಟರ್ ತೆರೆಯಲಾಗಿದ್ದು, ಎಲ್ಲ ರೈಲುಗಳ ಮುಂಗಡ ಟಿಕೆಟ್ ಪಡೆಯಬಹುದಾಗಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com