ಲಾವಣ್ಯ ಬೈಂದೂರು ವಾರ್ಷಿಕೋತ್ಸವ


ಬೈಂದೂರು: ಇಲ್ಲಿನ ಲಾವಣ್ಯ ಬೈಂದೂರು ಇದರ 36ನೇ ವಾರ್ಷಿಕೋತ್ಸವ ಶಾರದಾ ವೇದಿಕೆಯಲ್ಲಿ ನಡೆಯಿತು. 
ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ಜೇಸಿ‌ಐ ನ ರಾಷ್ಟ್ರೀಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೇಸಿ ಸದಾನಂದ ನಾವುಡ ಮಾತನಾಡಿ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಅದರಲ್ಲಿ ತೊಡಗಿಕೊಳ್ಳುವಂತೆ ಮಾಡಿದಾಗ ಮಾತ್ರ  ಕಲಾ ಹಾಗೂ ರಂಗಚಟುವಟಿಕೆ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು  ಗ್ರಾಮೀಣ ಪ್ರದೇಶದಲ್ಲಿ ಕಳೆದ 36 ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಲಾವಣ್ಯ ಸಂಸ್ಥೆಯ ಕಾರ್‍ಯವೈಖರಿ ಪ್ರಶಂಸಾರ್ಹವಾಗಿದೆ. ಇಂದು ಕಲೆಗಳನ್ನು ಗುರುತಿಸಿ, ಕಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಇಲ್ಲದಿದ್ದರೆ ಮುಂದೊಂದು ದಿನ ನಮ್ಮ ಯಕ್ಷಗಾನ, ನಾಟಕಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.
 ಲಾವಣ್ಯ ಅಧ್ಯಕ್ಷ ಬಿ.ರಾಮ ಟೈಲರ್ ಅಧ್ಯಕ್ಷತೆ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೂರ್ತಿ, ಸ್ಥಾಪಕಾಧ್ಯಕ್ಷ ಶ್ರೀನಿವಾಸ ಪ್ರಭು ಉಪಸ್ಥಿತರಿದ್ದರು.
      ಈ ಸಂದರ್ಭದಲ್ಲಿ ಕಲಾವಿದ ವಿನೋದ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು. ಗಣಪತಿ ಹೋಬಳಿದಾರರನ್ನು ಅಭಿನಂದಿಸಲಾಯಿತು.
      ಸದಾಶಿವ ಡಿ. ಸ್ವಾಗತಿಸಿದರು. ಉದಯ ಆಚಾರ್ಯ ಕಾರ್‍ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಲಾವಣ್ಯ ಕಲಾವಿದರು ಮರಣ ಮೃದಂಗ ಎಂಬ ನಾಟಕವನ್ನು ಅಭಿನಯಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com