ಕುಂದಾಪುರ ಪುರಸಭಾ ಚುನಾವಣಾ ವೇಳಾಪಟ್ಟಿ

ಕುಂದಾಪುರ: ಕುಂದಾಪುರ ಪುರಸಭೆಯ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
      ಚುನಾವಣಾ ವೇಳಾಪಟ್ಟಿಯ ಪ್ರಕಾರ  ಫೆ.16 ರಿಂದ ಫೆ. 23ರ ವರೆಗೆ ಬೆ,11 ರಿಂದ ಮಧ್ಯಾಹ್ನ 3 ಗಳಟೆಯ ನಡುವೆ ನಾಮ ಪತ್ರವನ್ನು ಸ್ವೀಕರಿಸಲಾಗುವುದು. ಫೆ. 25ರಂದು ಬೆ, 11 ರಿಂದ ನಾಮಪತ್ರಗಳನ್ನು ಪರೀಶಿಲಿಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನೋಟಿಸನ್ನು ಫೆ.27 ರಂದು ಮಧ್ಯಾಹ್ನ 3 ಗಂಟೆಯ ಮುಂಚೆ ಸಂಬಂಧಪಟ್ಟ ಚುನಾವಣಾಧಿಕಾಯವರಿಗೆ ಸಲ್ಲಿಸಬಹುದಾಗಿದೆ, ಮತದಾನವನ್ನು ಮಾ.7 ರಂದು ಬೆಳಿಗ್ಗೆ 7ರಿಂದ ಸಂಜೆ 5 ರ ತನಕ ಆಯಾ ಮತದಾನ ಕೇಂದ್ರಗಳಲ್ಲಿ ನಡೆಸಲಾಗುವುದು. ಮಾ. 11ರಂದು ಮತ ಎಣಿಕೆ ಕಾರ್ಯವನ್ನು ಭಂಡಾರ್ಕಾರ್ಸ್ ಕಾಲೇಜಿನ ಕೊಯಾಕುಟ್ಟಿ ಸಂಭಾಂಗಣದಲ್ಲಿ ಬೆಳಿಗ್ಗೆ 8ಕ್ಕೆ ಆರಂಭಿಸಲಾಗುವುದು. 
       ಪುರಸಭೆಯ 1 ರಿಂದ 8ರ ವರೆಗಿನ ವಾರ್ಡುಗಳ ಚುನಾವಣಾಧಿಕಾರಿಗಳ ಕಛೇರಿಯನ್ನು ಕುಂದಾಪುರ ಪುರಸಭೆ ಹಾಗೂ 9 ರಿಂದ 16 ರ ವಾರ್ಡುಗಳ ಚುನಾವಣಾಧಿಕಾರಿಗಳ ಕಛೇರಿಯನ್ನು ಕುಂದಾಪುರ ತಾ.ಪಂ ಕಛೇರಿಯಲ್ಲಿ ಹಾಗೂ 17ರಿಂದ 23ರ ವರೆಗಿನ ವಾರ್ಡುಗಳ ಚುನಾವಣಾಧಿಕಾರಿಗಳ ಕಛೇರಿಯನ್ನು ಕುಂದಾಪುರ ಕೃಷಿ ನಿರ್ದೇಶಕರ ಕಛೇರಿಯಲ್ಲಿ ತೆರೆಯಲು ಏರ್ಪಾಡು ಮಾಡಲಾಗಿದೆ ಎಂದು ಕುಂದಾಪುರ ತಾಹಶೀಲ್ದಾರರ ಪ್ರಕಟಣೆ ತಿಳಿಸಿದೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com