ಕುಂದಾಪುರ: 13 ಶಾಸಕರು ರಾಜೀನಾಮೆ ನೀಡಿರುವುದರಿಂದ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಹುಮತ ಇಲ್ಲದೇ ಇರುವ ಸರ್ಕಾರ ಕೂಡಲೇ ವಿಧಾನ ಸಭೆಯನ್ನು ವಿಸರ್ಜಿಸಿ, ಚುನಾವಣೆ ನಡೆಸಬೇಕು ಎಂದು ತಾಲ್ಲೂಕು ಸಿಪಿಐ(ಎಂ)ವತಿಯಿಂದ ಗುರುವಾರ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಉಡುಪಿ ಜಿಲ್ಲಾ ಸಿಪಿಐ(ಎಂ) ಸಮಿತಿಯ ಕಾರ್ಯದರ್ಶಿ ಕೆ.ಶಂಕರ್, ಜಿಲ್ಲಾ ಸಮಿತಿಯ ಸದಸ್ಯರಾದ ಯು.ದಾಸ ಭಂಡಾರಿ, ಎಚ್. ನರಸಿಂಹ ಹಾಗೂ ಸುರೇಶ ಕಲ್ಲಾಗರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ತಾಲ್ಲೂಕು ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ವೆಂಕಟೇಶ ಕೋಣಿ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com