ಮನಸೂರೆಗೊಳಿಸಿದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ


ಕುಂದಾಪುರ: ಮುಂದಿನ ಡಿಸೆಂಬರ್ನಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ `ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್' ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನುಡಿಸಿರಿ ಘಟಕಗಳನ್ನು ದೇಶ ವಿದೇಶಗಳಲ್ಲಿ ಸಂಘಟಿಸುವ ಉದ್ದೇಶದಿಂದ ಈ ಕಲಾಯಾತ್ರೆ ನಡೆಸಲಾಗುತ್ತಿದ್ದು, ಈಗಾಗಲೇ ವಿದೇಶಗಳಲ್ಲಿ ವ್ಯಾಪಕ ಬೆಂಬಲವ್ಯಕ್ತವಾಗಿದ್ದು, 2000 ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ದುಬಾಯಲ್ಲಿ 3,500 ಮಂದಿ, ಅಬುಧಾಬಿಯಲ್ಲಿ 2,000 ಮತ್ತು ಬಹ್ರೈನ್ನಲ್ಲಿ 2,500 ಕ್ಕೂ ಅಧಿಕ ಮಂದಿ ಮೂರುವರೆ ತಾಸುಗಳಷ್ಟು ಸುದೀರ್ಘ ಸಾಂಸ್ಕೃತಿಕ ಕಲಾಪಗಳಿಗೆ ಸಾಕ್ಷಿಯಾದರು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಲಾತ್ಮಕವಾಗಿ ಕಟ್ಟುವುದರ ಜೊತೆಗೆ ಒಂದು ಉತ್ತಮ ಸಮಜವನ್ನು ಸೃಷ್ಟಿಸುವ ಮೂಲ ಉದ್ದೇಶದೊಂದಿಗೆ ಕಲಾ ಆಸ್ವಾದನೆಯ ಮೂಲಕ ಕನ್ನಡವನ್ನು ವಿಶ್ವದೆಲ್ಲೆಡೆ ಪಸರಿಸುವ ಪ್ರಯತ್ನವನ್ನು ಆಳ್ವಾಸ್ ನುಡಿಸಿ ಮಾಡುತ್ತಿದೆ. ಸೌಂದರ್ಯ ಪ್ರಜ್ಞೆಯ ಮನಸ್ಸು ಕಟ್ಟುವ ಕೆಲಸ ಕೇವಲ ಒಂದು ಸಂಸ್ಥೆಯಿಂದ ಮಾಡುವ ಸಾಧನೆಯಲ್ಲ. ಅದಕ್ಕಾಗಿ ಸರ್ವರೂ ಸಿದ್ಧವಾಗಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ಅಧ್ಯಕ್ಷರಾದ ಮೋಹನ್ ಆಳ್ವಾ ಹೇಳಿದರು.
       ಅವರು ಆದಿತ್ಯವಾರ ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಕೆನರಾ ಕಾಲೇಜ್ ಆಫ್ ನರ್ಸಿಂಗ್ ಇಲ್ಲಿಯ ಬಯಲು ರಂಗಮಂಟಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಮತ್ತು ಆಳ್ವಾಸ್ ನುಡಿಸಿರಿ ಘಟಕ, ಕುಂದಾಪುರ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಜರಗಿದ ಆಳ್ವಾಸ್ ಸಾಂಸ್ಕೃತಿಕ ವೈಭವ 2013ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
     ಮುಂದಿನ ಡಿಸೆಂಬರ್ನಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ `ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್' ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನುಡಿಸಿರಿ ಘಟಕಗಳನ್ನು ದೇಶ ವಿದೇಶಗಳಲ್ಲಿ ಸಂಘಟಿಸುವ ಉದ್ದೇಶದಿಂದ ಈ ಕಲಾ ಯಾತ್ರೆಯನ್ನು ನಡೆಸಲಾಗುತ್ತಿದ್ದು, ಪ್ರಪಂಚದ 25 ರಾಷ್ಟ್ರಗಳನ್ನು ಸಂಘಟಿಸಲಾಗುವುದು. ಇದಕ್ಕಾಗಿ 5 ಲಕ್ಷ ಜನರು ಸದಸ್ಯತ್ವ ಪಡೆಯುವ ಸಾಧ್ಯತೆ ಇದೆ ಎಂದವರು ಹೇಳಿದರು. 
    ಸಭಾ ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕೆನರಾ ಕಾಲೇಜ್ ಆಫ್ ನರ್ಸಿಂಗ್ ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ, ಉದ್ಯಮಿಗಳಾದ ಕೆ. ಆರ್ ನಾಯ್ಕ್, ಗಣೇಶ್ ಶೆಟ್ಟಿ ಮೊಳಹಳ್ಳಿ, ಆನಂದ್ ಸಿ. ಕುಂದರ್, ರಫೀಕ್ ಕೋಟೇಶ್ವರ, ಭಾಸ್ಕರ ನಾಯ್ಕ್, ಶಿಕ್ಷಕ ಕೆ.ಎಸ್. ಮಂಜುನಾಥ್, ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಉಪಾಧ್ಯಕ್ಷ ಗಾಯಕ ಗಣೇಶ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.
    ಶಿಕ್ಷಕ ಚಂದ್ರಶೇಖರ ಬೀಜಾಡಿ ಸ್ವಾಗತಿಸಿದರು. ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.
        ಕಾರ್ಯಕ್ರಮದ ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ತರಬೇತಿಗೊಂಡ 160 ವಿದ್ಯಾರ್ಥಿ ಕಲಾವಿದರಿಂದ ಭರತ ನಾಟ್ಯ, ಕಥಕ್, ಮೋಹಿನಿ ಅಟ್ಟಂ, ಆಂಧ್ರ ಪ್ರದೇಶದ ಬಂಜಾರ್, ಬಂಗಾಲದ ಪುರೂಲಿಯಾ ಭಾವೋ (ಭಾರೀ ಗಾತ್ರದ ಸಂಹಗಳ ನೃತ್ಯ) ಕುಚಿಪುಡಿ, ಮಹರಾಷ್ಟ್ರದ ಲಾವಣಿ ನೃತ್ಯ, ಕರ್ನಾಟಕದ ಕಂಸಾಳೆ, ಭಾಸ ಕವಿಯ ಏಕಾಂಕ ನಾಟಕ ` ಮಧ್ಯಮ ವ್ಯಾಯೋಗಃ'  ಸ್ಟಿಕ್ ಡ್ಯಾನ್ಸ್,  ಕೇರಳದ ಒಪ್ಪತ್ತಾಮ್, ಬಡಗಿನ ಯಕ್ಷಗಾನ ಪ್ರಯೋಗ ` ದಶಾವತಾರ' ಕೇರಳದ ಒಪ್ಪಳಂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ನಡೆಯಿತು. ಪೋಟೋ: ಸುಧಾಕರ್ ವಕ್ವಾಡಿ
 ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com