ಫೆ17. ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ಗಾಳಿಪಟ ಉತ್ಸವ


ಬಸ್ರೂರು: ಇಲ್ಲಿನ ಗುರುಕುಲ ಪಬ್ಲಿಕ್‌ ಸ್ಕೂಲ್‌ ನೇತೃತ್ವದಲ್ಲಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ಫೆ. 17ರಂದು ಅಪರಾಹ್ನ 2 ಗಂಟೆಗೆ ಕುಂದಾಪುರ - ಕೋಟೇಶ್ವರ ಕಡಲ ಕಿನಾರೆಯಲ್ಲಿ ವಿದ್ಯಾರ್ಥಿಗಳಿಗಾಗಿ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನ 'ಗಾಳಿ ಪಟ ಉತ್ಸವ' ನಡೆಯಲಿದೆ 
      ಈ ಗಾಳಿಪಟ ಉತ್ಸವದಲ್ಲಿ ಅಂತರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ದಾಖಲೆ ಮಾಡಿದ ಮಂಗಳೂರಿನ 'ಟೀಂ ಮಂಗಳೂರು' ತಂಡದವರು ಭಾಗವಹಿಸಲಿದ್ದಾರೆ. ಅವರಿಂದ ಆಕರ್ಷಕ ಗಾಳಿಪಟ ಪ್ರದರ್ಶನ ಮತ್ತು ಹಾರಾಟ ನಡೆಯಲಿದೆ. ಇದೇ ಸಂದರ್ಭ ಕಲಾವಿದರಿಗೆ ಮರಳುಶಿಲ್ಪ ಸ್ಪರ್ಧೆಯೂ ನಡೆಯಲಿದೆ. ಗಾಳಿಪಟ ಸ್ಪರ್ಧೆ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗಗಳಲ್ಲಿ ನಡೆಯಲಿದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಗುವುದು.
       ಪಂದ್ಯಾಟವನ್ನು ಉಡುಪಿ ಜಿಲ್ಲಾಧಿಕಾರಿ ಡಾ| ಟಿ.ಎಂ. ರೇಜು ಉದ್ಘಾಟಿಸಲಿದ್ದು, ಬಾಂಡ್ಯ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಂಡ್ಯ ಎಜ್ಯುಕೇಶನ್‌ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೆಶಕಿ ಅನುಪಮಾ ಎಸ್‌. ಶೆಟ್ಟಿ ಅವರು ಭಾಗವಹಿಸಲಿದ್ದಾರೆ 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com