ಶಿರೂರು ಗ್ರೀನ್‌ವ್ಯಾಲಿ ವಾರ್ಷಿಕೋತ್ಸವದಲ್ಲಿ ಹರ್ಭಜನ್ ಸಿಂಗ್


ಶಿರೂರು: ಇಂದು ವಿದ್ಯಾರ್ಥಿಗಳ ಕಲಿಕೆಗೆ ಅಪರಿಮಿತ ಅವಕಾಶಗಳಿದ್ದು ಶ್ರಮ ವಹಿಸಿ ದುಡಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದು ಭಾರತ ಕ್ರಿಕೆಟ ತಂಡದ ಸದಸ್ಯ ಹರಭಜನ್ ಸಿಂಗ್ ಹೇಳಿದರು.
 ಅವರು ಶುಕ್ರವಾರ ಸಂಜೆ ಜರುಗಿದ ಶಿರೂರು ಗ್ರೀನ್‌ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
    ಇಂತಹ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ನನಗೆ ನನ್ನ ಶಾಲಾದಿನಗಳ ನೆನಪಾಗುತ್ತಿದೆ. ವಿದ್ಯಾರ್ಥಿಗಳು ಆಟವನ್ನು ಹೇಗೆ ಉಲ್ಲಾಸದಿಂದ ಆಟವಾಡುತ್ತಾರೋ, ಹಾಗೆಯೇ ಶಿಕ್ಷಣವನ್ನು ಸಹ ಉಲ್ಲಾಸದಿಂದ ಪಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿಯು ಸಹ ಇಂತಹ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಅಬ್ದುಲ್ ಕಾದರ್ ಭಾಷಾ ನಿಜವಾಗಲೂ ಅಭಿನಂದನಾರ್ಹರು ಎಂದು ಪ್ರಶಂಸಿದರು. ಶಿರೂರು ವೆಲ್‌ಫೆರ್ ಟ್ರಸ್ಟ್ ಆಡಳಿತ ನಿರ್ದೇಶಕ ಅಬ್ದುಲ್ ಖಾದರ್ ಭಾಷಾ ಮತ್ತು ಹಿರಿಯ ಉಪಾಧ್ಯಕ್ಷ ಡಾ. ಸಯ್ಯದ್ ಹಸನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹರಭಜನ್‌ಸಿಂಗ್ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಜಾನ್ ಮ್ಯಾಥ್ಯೂ ಸ್ವಾಗತಿಸಿ, ವರದಿ ವಾಚಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com