ಅತಿಥಿ ಉಪನ್ಯಾಸಕರ ಪ್ರತಿಭಟನೆ


ಕೋಟೆಶ್ವರ: ಅತಿಥಿ ಉಪನ್ಯಾಸಕರಿಗೆ ಸಂದಾಯವಾಗಬೇಕಿದ್ದ ಸಂಬಳವನ್ನು ಕಳೆದ ಜೂನ್ ತಿಂಗಳಿನಿಂದ ಈ ತನಕ ಸಂಬಳ ನೀಡಿಲ್ಲ. ಇದರಿಂದಾಗಿ ಅತಿಥಿ ಉಪನ್ಯಾಸಕರುಗಳ ಕುಟುಂಬಗಳು ಬೀದಿಗೆ ಬೀಳುವಂತಹ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
      ಅವರು ಕೋಟೇಶ್ವರದಲ್ಲಿ ಜರುಗಿದ ಉಡುಪಿ ಜಿಲ್ಲೆಯ ಅತಿಥಿ ಉಪನ್ಯಾಸಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
      ಪ್ರತಿ ವರ್ಷವೂ ಪ್ರತಿಭಟಿಸುತ್ತಾ ಬಂದರೂ ಸರಕಾರ ಒಂದಷ್ಟು ಸಂಬಳ ಬಿಡುಗಡೆ ಮಾಡಿ ಉಪನ್ಯಾಸಕರನ್ನು ಸಂತೈಸುವ ಪ್ರಯತ್ನ ಮಾಡುತ್ತಿದೆ. ಈ ಬಾರಿ ಈ ರೀತಿ ಆಗಲು ಬಿಡೋದಿಲ್ಲ.  ಅತಿಥಿ ಉಪನ್ಯಾಸಕರನ್ನು ನಿಕೃಷ್ಟವಾಗಿ ಕಾಣುತ್ತಿರುವುದು ಖಂಡನೀಯ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಸಂಬಳದ ಜತೆಯಲ್ಲಿ ನಮ್ಮ ಕೆಲವೊಂದು ಬೇಡಿಕೆ ಈಡೇರಿಸದ ಹೊರತು ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಅವರು ತಿಳಿಸಿದ್ದಾರೆ.
        ಪ್ರತಿ ವರ್ಷವೂ ಮರುಸಂದರ್ಶನ ನಡೆಸುವುದನ್ನು ಕೈಬಿಡಬೇಕು, ಕಾಲೇಜು ಅಭಿವೃದ್ಧಿ ಮಂಡಳಿಯ ಶಕ್ತಿಗಳು ಹಸ್ತಕ್ಷೇಪ ಮಾಡುವುದು ನಿಲ್ಲಿಸಬೇಕು, ನಿಗದಿತ ವೇತನವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಬೇಕು, ಸೇವಾ ಭದ್ರತೆ ಒದಗಿಸಬೇಕು, ಮಾಸಿಕ ವೇತನವನ್ನು 25 ಸಾವಿರ ರೂ.ಗೆ ಹೆಚ್ಚಿಸಬೇಕು. ಸೇವಾ ಅವಧಿಯನ್ನು 12 ತಿಂಗಳಿಗೆ ನಿಗದಿಗೊಳಿಸಬೇಕು, ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
        ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪ್ರಮುಖರಾದ ಭಾಸ್ಕರ ಬಿಲ್ಲವ, ನಾಗೇಶ್, ಸುಬ್ರಹ್ಮಣ್ಯ ಹಾಗೂ ಪಾಂಡುರಂಗ ಉಪಸ್ಥಿತರಿದ್ದರು. ಜಿಲ್ಲೆಯ ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com