ಗ್ರಾಮಾಭಿವೃದ್ಧಿ ಯೋಜನೆಯಿಂದ ಉಳಿತಾಯ ಮನೋಭಾವ: ಡಾ. ಹೆಗ್ಗಡೆ


ಆಲೂರು: ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯು ರಾಜ್ಯದ 17 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 24 ಲಕ್ಷ ಸದಸ್ಯರನ್ನು ಹೊಂದಿದೆ. ಇದು ತನ್ನ ಸದಸ್ಯರಿಗೆ 2 ಸಾವಿರ ಕೋಟಿ ಸಾಲ ನೀಡಿ, 99% ಹಣ ಮರುಪಾವತಿಯನ್ನು ಕಂಡಿದೆ. ಈ ಯೋಜನೆಯು ಸಣ್ಣ ಮೊತ್ತದಿಂದ (10 ರೂ.) 1.50 ಕೋಟಿ ಉಳಿತಾಯವಾಗಿದೆ. ಇದರಿಂದಾಗಿ ಹಣದ ಸದ್ಬಳಕೆಯಾಗುತ್ತಿದ್ದು ಜನರಲ್ಲಿ ಉಳಿತಾಯ  ಮನೋಭಾವ ಬೆಳೆದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
       ಅವರು ಆಲೂರು ಶಾಲೆ ವಠಾರದಲ್ಲಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಕುಂದಾಪುರ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಲೂರು-ಹರ್ಕೂರು ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಸ್ವಾತಂತ್ರ್ಯ ನಂತರ ಸರ್ಕಾರಗಳು ಗ್ರಾಮಾಭಿವದ್ಧಿಯ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಸಹ ಅವುಗಳು ಸಂಪೂರ್ಣವಾಗಿ ಸಫಲವಾಗಲಿಲ್ಲ. ನಮ್ಮ ಗ್ರಾಮಾಭಿವದ್ಧಿ ಯೋಜನೆಯ ಮುಖ್ಯ ಉದ್ದೇಶ ದೇವರ ಮೇಲೆ ನಂಬಿಕೆ, ಭಕ್ತಿ, ಧರ್ಮದ ಆಶ್ರಯದ ಜೊತೆಗೆ ಜನರು ಶ್ರಮವಹಿಸಿ ದುಡಿಯಲೋಸುಗ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
       ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ತಂದ ಹೊಸ ಪಿಂಚಣಿ ಯೋಜನೆ ಜೀವನ ಮಧುರ ಯಶಸ್ವಿ ಯೋಜನೆಯಾಗಿದ್ದು ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಗ್ರಾಮೀಣ ಜನರು ಗ್ರಾಮಾಭಿವದ್ಧಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಾಗ ಅವರ ಜೀವನ ಮಟ್ಟ ಸುಧಾರಿಸಿ ನ್ಯಾಯಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
        ತಾಲೂಕು ಜನಜಾಗತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ,  ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ, ಸಮಿತಿ ಅಧ್ಯಕ್ಷ ಜಯಶೀಲ ಶೆಟ್ಟಿ ನಾರ್ಕಳಿ, ಕುಂದೇಶ್ವರ ದೇವಳದ  ಧರ್ಮದರ್ಶಿ ಡಾ. ಎಚ್.ವಿ. ನರಸಿಂಹ ಮೂರ್ತಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಗ್ರಾಮಾಭಿವದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದುಗ್ಗೆ ಗೌಡ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com