ದಿಲ್ಲಿಗೆ ತೆರಳುವ ನಿಜಾಮುದ್ದೀನ್‌ - ಎರ್ನಾಕುಲಂ ನಿಲುಗಡೆ

ಕುಂದಾಪುರ: ದಿಲ್ಲಿಗೆ ತೆರಳುವ ನಿಜಾಮುದ್ದೀನ್‌ - ಎರ್ನಾಕುಲಂ ರೈಲು ಕುಂದಾಪುರದಲ್ಲಿ  ಫೆ.20 ರ ರಾತ್ರಿ 11 ಗಂಟೆಗೆ ಮೊಡಲ ಭಾರಿಗೆ ನಿಲುಗಡೆಗೊಂಡಿತು. ನಾಗರಿಕರು, ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಈ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಕರಾವಳಿ ಭಾಗದ ಜನರಿಗೆ ಈ ರೈಲು ನಿಲುಗಡೆಯಿಂದ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಎಲ್ಲ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕದ ಸೌಲಭ್ಯ ದೊರೆಯಲಿದೆ. ಈ ರೈಲು ಪ್ರತಿನಿತ್ಯ ಕುಂದಾಪುರದ ಮೂಲಕ ಹಾದು ಹೋಗಲಿದ್ದು, ಆಗ್ರಾ - ಶಿರಡಿ (ನಾಸಿಕ್‌) - ಮಥುರಾ - ಗೋವಾ - ಪನ್ವೇಲ್‌ - ದಿಲ್ಲಿಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ.

ಈ ಸಂದರ್ಭ ಸಮಿತಿಯ ಸಂಚಾಲಕ ಸೋಮಶೇಖರ್‌ ಶೆಟ್ಟಿ ಕೆಂಚನೂರು ಪದಾಧಿಕಾರಿಗಳಾದ ಎಚ್‌.ಎಸ್‌. ಹತ್ವಾರ್‌, ಜೋಯ್‌ ಕರ್ವಾಲೋ, ಸಚ್ಚಿದಾನಂದ ಶೆಟ್ಟಿ, ಶ್ರೀಶನ್‌, ಮನೋಜ್‌ ನಾಯರ್‌, ಪ್ರಕಾಶ್ಚಂದ್ರ ಶೆಟ್ಟಿ, ಚಂದ್ರಶೇಖರ್‌, ಕಿಶನ್‌ ಕೆಂಚನೂರು, ನಿರಂಜನ್‌ ಆಸೋಡು, ಆವರ್ಸೆ ಸುಧಾಕರ ಶೆಟ್ಟಿ, ಕೆ. ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಯನ್ನು ಪರಿಗಣಿಸಿ ಉಡುಪಿ - ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ರೈಲ್ವೇ ಸಚಿವರು ಹಾಗೂ ರೈಲ್ವೇ ಮಂಡಳಿಯ ಮೇಲೆ ಅವಿರತವಾಗಿ ಒತ್ತಡ ಹೇರಿ ಇಲಾಖೆಯ ಅನುಮತಿ ಪಡೆಯುವಲ್ಲಿ ಸಫಲರಾಗಿರುವುದಕ್ಕೆ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅವರಿಗೆ ಕೃತಜ್ಞತೆ ಸಲ್ಲಿಸಿದೆ.ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com