ಫೆ. 20 ರಿಂದ ದೆಹಲಿ ರೈಲು ಕುಂದಾಪುರದಲ್ಲಿ ನಿಲುಗಡೆ


ಕುಂದಾಪುರ: ಫ್ರೆಬ್ರವರಿ 20ರಿಂದ ದೆಹಲಿಗೆ ಹೋಗುವ ನಿಜ್ಹಾಮುದ್ದೀನ್ – ಎರ್ನಾಕುಲಂ ರೈಲನ್ನು ಕುಂದಾಪುರದಲ್ಲಿ ನಿಲುಗಡೆಗೆ ರೈಲ್ವೇ ಮಂಡಳಿ ಸಮ್ಮತಿ ಸೂಚಿಸಿದ್ದು ಕರಾವಳಿ ಭಾಗದ ಜನರಿಗೆ ಈ ರೈಲು ನಿಲುಗಡೆಯಿಂದ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಎಲ್ಲಾ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕದ ಸೌಲಭ್ಯ ದೊರೆಯಲಿದೆ.  ರೈಲು ಪ್ರತಿನಿತ್ಯ ಕುಂದಾಪುರದ ಮೂಲಕ ಹಾದು ಹೋಗಲಿದ್ದು, ಆಗ್ರಾ - ಶಿರಡಿ (ನಾಸಿಕ್) – ಮಥುರಾ – ಗೋವಾ – ಪನ್ವೇಲ್ – ದೆಹಲಿಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೂ ಕೂಡಾ ಇದರಿಂದ ಅನುಕೂಲವಾಗಲಿದೆ.
   ಕುಂದಾಪುರ ತಾಲೂಕಿನ ಜನರು ಈ ರೈಲಿನ ಸದುಪಯೋಗ ಪಡೆದುಕೊಳ್ಳಬೇಕೆಂದು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
      ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಯನ್ನು ಪರಿಗಣಿಸಿ ಉಡುಪಿ-ಚಿಕ್ಕಮಗಳೂರು ಸಂಸದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ರೈಲ್ವೇ ಸಚಿವರು ಹಾಗೂ ರೈಲ್ವೇ ಮಂಡಳಿಯ ಮೇಲೆ ಅವಿರತವಾಗಿ ಒತ್ತಡ ಹೇರಿ ಇಲಾಖೆಯ ಅನುಮತಿ ಪಡೆಯುವಲ್ಲಿ ಸಫಲರಾಗಿದ್ದಾರೆ. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com