ಗಂಗೊಳ್ಳಿ: ಶ್ರೀ ಸುಬ್ರಹ್ಮಣ್ಯೇಶ್ವರ ಯೂಥ್ ಕ್ಲಬ್ ಬೆಣ್ಣೆಗೆರೆ ಇವರ ಆಶ್ರಯದಲ್ಲಿ ದಿ. ಗಿರೀಶ್ ಮೇಸ್ತ ಸ್ಮರಣಾರ್ಥ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರೂರಿನ ವಿಎಂಸಿಟಿ ತಂಡ ಪ್ರಥಮ ಸ್ಥಾನ ಪಡೆದು ಮೇಸ್ತ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಜಯ್ ಶಿರೂರು ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಉಪಾಂತ್ಯ ಪಂದ್ಯಗಳಲ್ಲಿ ವಿಎಂಸಿಟಿ ತಂಡ ಬೆಣ್ಣೆಗೆರೆಯ ಶ್ರೀ ಸುಬ್ರಹ್ಮಣ್ಯೇಶ್ವರ ತಂಡವನ್ನು ಮತ್ತು ಜಯ ಶಿರೂರು ತಂಡ ಎಸ್ಎಸ್ಸಿಟಿ ಶಿರೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಮತ್ಸ್ಯೋದ್ಯಮಿ ರಮೇಶ ಕುಂದರ್ ಕೋಟ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ಧ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಉದ್ಯಮಿ ಉಮೇಶ ಮೇಸ್ತ, ಗುಜ್ಜಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಮೇಸ್ತ, ಬೆಣ್ಣೆಗೆರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ವಿಷ್ಣುಮೂರ್ತಿ ಮೇಸ್ತ, ಸಂಘದ ಅಧ್ಯಕ್ಷ ವೆಂಕಟೇಶ ಮೇಸ್ತ, ಕಾರ್ಯದರ್ಶಿ ಶ್ರೀನಿವಾಸ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾಟವನ್ನು ಗಂಗೊಳ್ಳಿ ಪಸರ್ನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಶೇಖರ ಸೂತ್ರಬೆಟ್ಟು ಉದ್ಘಾಟಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುರೇಂದ್ರ ಖಾವರ್ ಶುಭ ಹಾರೈಸಿದರು. 2 ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ ರಾಜ್ಯ ಮಟ್ಟದ 23 ತಂಡಗಳು ಭಾಗವಹಿದ್ದವು.
ಕುಂದಾಪ್ರ ಡಾಟ್ ಕಾಂ - editor@kundapra.com