ಶಿಕ್ಷಕರಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಲಿ: ರಮೇಶ್ ಗಾಣಿಗಬೈಂದೂರು: ಶಿಕ್ಷಕರು ಉತ್ತಮ ಸಮಾಜದ ರೂವಾರಿಗಳಾಗಿದ್ದು, ಅವರು ಸಮಾಜದಿಂದ ಉತ್ತಮ ಸಂಸ್ಕಾರಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದರೊಂದಿಗೆ ಮೌಲ್ಯಯುತವಾದ ಉತ್ತಮ ಸಂಸ್ಕಾರಗಳನ್ನು ಮಕ್ಕಳಿಗೆ ಒದಗಿಸುವುದು ಶಿಕ್ಷಕರ ಗುರುತರವಾದ ಹೊಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಕೊಲ್ಲೂರು ರಮೇಶ್ ಗಾಣಿಗ ಅವರು ಹೇಳಿದರು.
    ಬೈಂದೂರು ಕ್ಷೇತ್ರ ಶಿಕ್ಷಣಾದಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕೊಲ್ಲೂರು ಸಮೂಹ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಹಳ್ಳಿಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಶಾಲಾ ಶಿಕ್ಷಕರ ಸಮಾಲೋಚನಾ ಸಭೆಯನ್ನು ಹಳ್ಳಿಬೇರುವಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
    ಮುಖ್ಯ ಅತಿಥಿ ಯಳಜಿತ್ನ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಅವರು ಮಾತನಾಡಿ, ಶಿಕ್ಷಕರು ಗಂಧದ ಕೊರಡು ಇದ್ದಂತೆ, ಹೆಚ್ಚು ಹೆಚ್ಚು ತೇದಂತೆ ಹೆಚ್ಚು ಪರಿಮಳ ಬೀರಲು ಸಾಧ್ಯ. ಇಂದಿನ ಮಕ್ಕಳಲ್ಲಿ ಶಿಸ್ತು, ಸಂಯಮ ಕಡಿಮೆಯಾಗುತ್ತಿದ್ದು, ಕಲಿಕೆಯಲ್ಲಿ ಮಕ್ಕಳ ಆಸಕ್ತಿಯನ್ನು ಕೇಂದ್ರೀಕರಿಸುವ ಸವಾಲು ಶಿಕ್ಷಕರಿಗೆ ಹೆಚ್ಚಿದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತಯಾರುಗೊಳಿಸುವ ಹೊಣೆಗಾರಿಕೆ ಹೆಚ್ಚಿದೆ. ಮಕ್ಕಳಿಗೆ ಉತ್ತಮ ನೈತಿಕ ಶಿಕ್ಷಣವನ್ನು ನೀಡುವುದರಿಂದ, ಜೀವನಮೌಲ್ಯಗಳನ್ನು ಮತ್ತೆ ಮತ್ತೆ ತಿಳಿಹೇಳುವುದರಿಂದ ಉತ್ತಮ ಬದಲಾವಣೆ ತರಲು ಪ್ರಯತ್ನಿಸಬೇಕಾಗಿದೆ ಎಂದರು. ಐದನೆಯ ತರಗತಿಯ ನೂತನ ಪಠ್ಯಪುಸ್ತಕದ ಹಾಡುಗಳಿಗೆ ರಾಗ ಅಳವಡಿಸಿ ಹಾಡಿದ ಅವರು, ಪ್ರಾತ್ಯಕ್ಷಿಕೆಯ ಮೂಲಕ ಶಿಕ್ಷಕರಿಗೆ ಮಾಹಿತಿ ನೀಡಿದರು. ನ್ಯಾಯವಾದಿ ಉದಯ ಕೊಲ್ಲೂರು ಅವರು ಮಾಹಿತಿ ಹಕ್ಕು, ಆರ್ಟಿಇ ಮತ್ತು ಶಾಲಾ ದಾಖಲಾತಿ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರು. 
   ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಐತಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತ್ಯನಾ ಕೊಡೇರಿ, ಉಪ್ಪುಂದ ಸಿಆರ್ಪಿ ಜನಾರ್ದನ, ತಲ್ಲೂರು ಸಿಆರ್ಪಿ ಗಣಪತಿ ಹೋಬಳಿದಾರ್, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಹಳ್ಳಿಬೇರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮ ಹಳ್ಳಿಬೇರು, ಮುಖ್ಯಶಿಕ್ಷಕ ಕೇಶವಮೂತರ್ಿ ಉಪಸ್ಥಿತರಿದ್ದರು.
  ಶಿಕ್ಷಕ ನಾರಾಯಣ ಸ್ವಾಗತಿಸಿದರು. ಸಿಆರ್ಪಿ ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳ್ಳಿಬೇರು ಶಾಲಾ ಶಿಕ್ಷಕ ಹರೀಶ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಭಾಸ್ಕರ್ ವಂದಿಸಿದರು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com