ಪಡಿತರ ಅಸಮರ್ಪಕ; ಯುವ ಕಾಂಗ್ರೆಸ್ ಪ್ರತಿಭಟನೆ

ಬೈಂದೂರು: ಪಡಿತರ ಚೀಟಿಯಲ್ಲಾದ ಲೋಪವನ್ನು ಸರಿಪಡಿಸುವುದು ಹಾಗೂ ಅಸಮರ್ಪಕವಾದ ಪಡಿತರ ವಿತರಣೆಯನ್ನು ಸಮರ್ಪಕಗೊಳಿಸುವ ಬಗ್ಗೆ ಯುವ ಕಾಂಗ್ರೆಸ್ ಬೈಂದೂರು ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. 
       ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಬೈಂದೂರು ಕ್ಷೇತ್ರದಲ್ಲಿ ಬಡತನದಿಂದ ಕೂಡಿದ ಸಾವಿರಾರು ಕುಟುಂಬಗಳಿದ್ದು ಅವರಿಗೆ ಪಡಿತರ ಸಾಮಾಗ್ರಿ ಸರಿಯಾಗಿ ದೊರೆಯುತ್ತಿಲ್ಲ. ಮಾತ್ರವಲ್ಲದೆ ಪಡಿತರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಸರಕಾರ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
     ಯುವ ಕಾಂಗ್ರೆಸ್ ಬೈಂದೂರು ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ವಿಶೇಷ ತಹಶೀಲ್ದಾರ್ ಎಮ್. ಎ. ಖಾನ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶೇಖರ ಪೂಜಾರಿ ಉಪ್ಪುಂದ, ನಾಗರಾಜ ನಾವುಂದ, ರಾಜು ಪೂಜಾರಿ, ಮೊಹ್ಮದ್ ಗೌಸ್, ರಘು ತಾರಾಪತಿ, ಸುಬ್ರಹ್ಮಣ್ಯ ಮುಂತಾದವರು ಹಾಜರಿದ್ದರು. 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com