ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರ ಕಾರ್ಮಿಕರ ಹಾಗೂ ಪರ್ಸಿನ್ ಬೋಟ್ ಮಾಲಕರ ನಡುವೆ ಉಂಟಾದ ಸಮಸ್ಯೆಯಿಂದ ಆರಂಭಗೊಂಡಿದ್ದ ಪರ್ಸಿನ್ ಬೋಟ್ ಮುಷ್ಕರ ಮುಂದುವರಿದಿದೆ.
ಮೀನುಗಾರ ಕಾರ್ಮಿಕರ ಮತ್ತು ಪರ್ಸಿನ್ ಬೋಟ್ ಮಾಲಕರ ನಡುವೆ ಉಂಟಾದ ಸಮಸ್ಯೆ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ಪರ್ಸಿನ್ ಯೂನಿಯನ್ಗೆ ಸೇರಿದ ಸುಮಾರು 43 ಪರ್ಸಿನ್ ಬೋಟುಗಳು ಮೀನುಗಾರಿಕೆಗೆ ತೆರಳದೆ ಮುಷ್ಕರ ನಡೆಸುತ್ತಿದ್ದಾರೆ. ಯೂನಿಯನ್ ವ್ಯಾಪ್ತಿಗೆ ಒಳಪಡದ ಸುಮಾರು 3 ಪರ್ಸಿನ್ ಬೋಟುಗಳು ಮೀನುಗಾರಿಕೆ ನಡೆಸುತ್ತಿದೆ. ಕಾರ್ಮಿಕರ ಹಾಗೂ ಬೋಟ್ ಮಾಲಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದರೂ, ಪರ್ಸಿನ್ ಬೋಟುಗಳು ಇನ್ನೂ ಕಡಲಿಗಿಳಿದಿಲ್ಲ. ಹೀಗಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವ ಬಡ ಕಾರ್ಮಿಕರು ಅತಂತ್ರರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com