ಮದ್ರಾಸ್ ಗೊಂಬೆಯಾಟ ಕಾರ್ಯಗಾರಕ್ಕೆ ಭಾಸ್ಕರ್ ಕೊಗ್ಗ ಕಾಮತ್


ಕುಂದಾಪುರ: ಮಾ.13ರಿಂದ 18ರ ವರೆಗೆ ಚನೈನಲ್ಲಿ ನಡೆಯುವ ಮದ್ರಾಸ್ ಕ್ರಾಪ್ಟ್ ಫೌಂಡೇಶನ್ನವರ ಗೊಂಬೆಯಾಟ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ನಿರ್ದೇಶಕ, ಅಂತರಾಷ್ಟ್ರೀಯ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ್ ಕೊಗ್ಗ ಕಾಮತ್ ಭಾಗವಹಿಸಲಿದ್ದಾರೆ.
       ಈ ಸಂದರ್ಭದಲ್ಲಿ ಕಾರ್ಯಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ನೂರಾರು ಗೊಂಬೆಯಾಟ ತಂಡಗಳು ಭಾಗವಹಿಸಲಿದ್ದು, ಭಾಸ್ಕರ್ ಕಾಮತರು ಗೊಂಬೆಯಾಟದ ಬಗ್ಗೆ ಪ್ರಾತ್ಯಕ್ಷಿಕೆ, ಉಪನ್ಯಾಸ ಹಾಗೂ ಸಂವಾದವನ್ನು ನಡೆಸಿಕೊಡಲಿದ್ದಾರೆ. ಎಂದು ಪ್ರಕಟಣೆ ತಿಳಿಸಿದೆ.
  

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com