ವಿದ್ಯೆ ಶ್ರೇಷ್ಠ ಸಂಪತ್ತು: ಡಾ.ಶ್ರೀದೇವಿ ಕಟ್ಟೆ


ಕುಂದಾಪುರ: ನಮ್ಮ ಏಳ್ಗೆಗೆ ಕಾರಣವಾಗುವ ತಂದೆ-ತಾಯಿ ಮತ್ತು ಗುರು ಹಿರಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಮನಸ್ಸನ್ನು ಬೆಳೆಸಿಕೊಳ್ಳಿ ಎಂದು ಚಿನ್ಮಯಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಶ್ರೀದೇವಿ ಕಟ್ಟೆ ಅವರು ಕರೆ ನೀಡಿದರು.  ವ್ಯಕ್ತಿಗೆ ನಿಷ್ಠೆ, ಪ್ರಾಮಾಣಿಕತೆ, ಸತತ ಪ್ರಯತ್ನದಿಂದ ನಾವು ಯಶಸ್ಸನ್ನು ಸಾಧಿಸಬಹುದು ಎಂದು  ಸಾಧನೆಯ ಹಾದಿಯಲ್ಲಿ  ಅವರು ಹೇಳಿದರು.  ಹೇಳಿದರು.        
      ಅವರು  ಇಲ್ಲಿನ  ಸುವರ್ಣ ಸಂಭ್ರಮವನ್ನಾಚರಿಸಿಕೊಳ್ಳುತ್ತಿರುವ  ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಫೆ.19ರಂದು ನಡೆದ  ಜನರಲ್ ಪ್ರೊಫಿಶಿಯನ್ಶಿ ದತ್ತಿ ಬಹುಮಾನ ವಿತರಣಾ  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
     ಪ್ರಪಂಚದಲ್ಲಿ ನಾವು  ಏನನ್ನಾದರೂ ಕಳೆದುಕೊಳ್ಳಬಹುದು ಆದರೆ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ವಿದ್ಯೆಯಂತಹ ಶ್ರೇಷ್ಠ ಸಂಪತ್ತನ್ನು ಸತತ ಪ್ರಯತ್ನ, ಶೃದ್ಧೆ, ನಿಷ್ಠೆಯಿಂದ ಪಡೆದುಕೊಳ್ಳಬೇಕು. ಇಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು, ನಿಮ್ಮಲ್ಲಿ ಒಳ್ಳೆಯ ನಿರೀಕ್ಷೆ ಇಟ್ಟುಕೊಂಡಿರುವ ನಿಮ್ಮ ತಂದೆ, ತಾಯಿಯರ ಮನಸ್ಸಿಗೆ ಹಿತವಾಗುವ ರೀತಿಯಲ್ಲಿ ನಿಮ್ಮ ಬದುಕು ಬೆಳಗಬೇಕು ಎಂದು ಹೇಳಿದರು.   
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಭಂಡಾರ್ಕಾರ್ಸ್  ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ ದೋಮ ಮಾತನಾಡಿ ವಿದ್ಯಾಥರ್ಿಗಳಲ್ಲಿ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಮನೋಭಾವನೆ ಕಡಿಮೆ ಆಗುತ್ತಿದೆ. ಅದೊಂದು ವಿಚಿತ್ರ ಬೆಳವಣಿಗೆ.  ನಮ್ಮಲ್ಲಿ ಆಥರ್ಿಕ ಸಬಲತೆ ಎಷ್ಟೇ ಇದ್ದರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅದರಂತೆ ನಡೆಯುವುದು ಧರ್ಮ ಎಂದು ಹೇಳಿದರು.  
       ಈ ಸಂದರ್ಭದಲ್ಲಿ  ಭಂಡಾರ್ಕಾರ್ಸ್  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಎಂ.ಗೊಂಡ ಉಪಸ್ಥಿತರಿದ್ದರು. 
    ಕನ್ನಡ ವಿಭಾಗದ ಪ್ರೊ. ಗೋವಿಂದಪ್ಪ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಪ್ರೊ.ನಟರಾಜ್ ಅವರು ಜನರಲ್ ಪ್ರೊಫಿಶಿಯನ್ಶಿ ದತ್ತಿ ಬಹುಮಾನ ವಿಜೇತರ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಅರ್ಚನಾ ಪೈ ಕಾರ್ಯಕ್ರಮ ನಿರ್ವಹಿಸಿ, ದೀಕ್ಷಾ ಸ್ವಾಗತಿಸಿ, ದಿವ್ಯಾ ವಂದಿಸಿದರು. 
ಕುಂದಾಪ್ರ ಡಾಟ್ ಕಾಂ - editor@kundapra.com


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com