
ಅವರು ಇಲ್ಲಿನ ಸುವರ್ಣ ಸಂಭ್ರಮವನ್ನಾಚರಿಸಿಕೊಳ್ಳುತ್ತಿರುವ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಫೆ.19ರಂದು ನಡೆದ ವಾರ್ಷಿಕೋತ್ಸವ ಮತ್ತು ಆಟೋಟ ಸ್ಪರ್ಧೆ ಗಳ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಯಾವುದೇ ತಾಪತ್ರಯಗಳಿಲ್ಲದ ಇಂದಿನ ಕಾಲಮಾನದಲ್ಲಿ ಜನಿಸಿದ ನೀವು ಪುಣ್ಯವಂತರು. ಇವತ್ತಿನ ಯುವಜನತೆ ಉತ್ತಮ ವ್ಯವಸ್ಥೆಯ ನಡುವೆ ಉತ್ತಮ ಸ್ಥಾನದಲ್ಲಿದ್ದಾರೆ. ಪ್ರತಿಯೊಂದು ಸೌಲಭ್ಯವು ನಿಮಗೆ ಸುಲಭವಾಗಿ ಎಟುಕುತ್ತಿದೆ. ಇನ್ನೂ ಎರಡು ದಶಕಗಳ ಕಾಲ ಈ ಅಭಿವೃದ್ಧಿ ಪಥ ಮುಂದುವರಿಯಲಿದೆ. ಉದ್ಯೋಗಾವಕಾಶಗಳು ಹೆಚ್ಚಲಿದೆ. ಇಂತಹ ಉತ್ತಮ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಜೊತೆಯಲ್ಲಿ ಆತ್ಮವಿಶ್ವಾಸ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಜೀವನವನ್ನು ನಿರ್ವಹಿಸಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ ದೋಮ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಭಂಡಾಕರ್ಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಎಸ್.ದಿನಕರ ಶೆಟ್ಟಿ ಅವರು ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಅಂತರ ಕಾಲೇಜು ಮಟ್ಟದ ಬಡಗುತಿಟ್ಟು ಯಕ್ಷಗಾನ ಬಯಲಾಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ತರಗತಿ ಮಟ್ಟದ ನಿರ್ವಹಣಾ ಉತ್ಸವದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಾಣಿಜ್ಯ ವಿಭಾಗದ ಪ್ರೊ.ರಘುವೀರ್ ವಾಯ್.ಎಸ್ ಮತ್ತು ದೈಹಿಕ ನಿರ್ದೇಶಕರಾದ ಶ್ರೀ ಶಂಕರನಾರಾಯಣ ಬಹುಮಾನ ವಿಜೇತರ ವರದಿ ವಾಚಿಸಿದರು. ವಿದ್ಯಾರ್ಥಿಳಾದ ಶ್ವೇತಶ್ರೀ ಕಾರ್ಯಕ್ರಮ ನಿರ್ವಹಿಸಿ, ಅನಿಲ್ರಾಜ್ ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com