ಕುಂದಾಪುರ: ಎನ್.ಎಸ್.ಎಸ್. ವಿಶೇಷ ಶಿಬಿರಗಳಲ್ಲಿ ಸಮಯ ಪ್ರಜ್ಞೆ, ಅಭಿವ್ಯಕ್ತಿ, ಸಹಜೀವನ ಮುಂತಾದವುಗಳನ್ನು ಕಲಿಯಲು ಸಾಧ್ಯ. ಅಂತೆಯೇ ತಾಳ್ಮೆ, ಸಂಯಮ ಹಾಗೂ ಸಹಕಾರ ಮನೋಭಾವನೆಗಳನ್ನು ಅರಿವುದರೊಂದಿಗೆ ನಮ್ಮ ವ್ಯಕ್ತಿತ್ವ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ. ಇದರೊಂದಿಗೆ ನಮ್ಮ ಪ್ರತಿಭೆ ಉದ್ದೀಪನಗೊಳ್ಳುತ್ತದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿದ್ದ ಶೈಲಜಾ ಯು. ಹಾಗೂ ಸುಜಾತ ಶೆಟ್ಟಿ ಹೇಳಿದರು.
ಅವರು ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರಿಗೆ ವಿಶೇಷ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಪ್ರಸನ್ನ ಕುಮಾರ ಐತಾಳ ಇವರು ಉಪಸ್ಥಿತರಿದ್ದು, ಶಿಬಿರದ ಮಹತ್ವ ತಿಳಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com