ಕುಂದಾಪುರ: ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟಿದ್ದ ಕುಂದಾಪುರ-ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ದುರಸ್ಥಿ ಕಾರ್ಯ ಆರಂಭಗೊಂಡಿದೆ.
ಈ ಹಿಂದೆ ಹತ್ತು ಹಲವು ಸಂಘಟನೆಗಳು ರಸ್ತೆ ಅವ್ಯವಸ್ಥೆ ಬಗ್ಗೆ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕದ ವತಿಯಿಂದ ಸ್ಥಳದ ಸಂಪೂರ್ಣ ಚಿತ್ರಣದ ಸಹಿತ ಜಿಲ್ಲಾಧಿಕಾರಿಗಳಿಗೆ ದುರಸ್ಥಿ ಆರಂಭಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಸಂಭಂದಪಟ್ಟ ಇಲಾಖೆಗೆ ಈ ಬಗ್ಗೆ ಸೂಚಿಸಿ ತ್ವರಿತಗತಿಯಲ್ಲಿ ದುರಸ್ಥಿಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಶಿಘ್ರ ಕಾಮಗಾರಿ ಆರಂಭಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಕುಂದಾಪುರ ತಾಲೂಕು ರೈತ ಸಂಘ ಎಚ್ಚರಿಕೆ ನೀಡಿತ್ತು.
ದುರಸ್ತಿ ಕಾರ್ಯ ಆರಂಭಗೊಂಡಿರುವುದು ವಾಹನ ಸವಾರರು, ನಿತ್ಯ ಪ್ರಯಾಣಿಕರುರಲ್ಲಿ ಸಂತಸ ಮೂಡಿಸಿದೆ.
ಅರಾಟೆ ಸೇತುವೆಯ ದುರವಸ್ಥೆ ಕುರಿತು ಕುಂದಾಪ್ರ ಡಾಟ್ ಕಾಂ ''ಅರಾಟೆ ರಾ. ಹೆ. ಸೇತುವೆ ದುರವಸ್ಥೆ: ವರ್ಷವಾದರೂ ಕೊನೆಗಾಣದ ಬವಣೆ !'' ಎಂಬ ಶಿರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.
ಕುಂದಾಪ್ರ ಡಾಟ್ ಕಾಂ - editor@kundapra.com