15ರಂದು ನಾರಾಯಣೀ ದೇವಳ ಬ್ರಹ್ಮರಥೋತ್ಸವ

ಬಸ್ರೂರು: ಇಲ್ಲಿನ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ 4ನೇ ವರ್ಷದ ಬ್ರಹ್ಮರಥೋತ್ಸವ ಫೆ. 15 ರಂದು ನಡೆಯಲಿದೆ. 13 ರಿಂದ ಬ್ರಹ್ಮರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, 16 ರವರೆಗೆ ನಡೆಯಲಿದೆ. ಬ್ರಹ್ಮರಥೋತ್ಸವದ ಪೂರ್ವಭಾವಿಯಾಗಿ ಶ್ರೀದೇವಿಗೆ ವಸಂತ ಮಂಟಪದಲ್ಲಿರಿಸಲು ಕುಳಾವಿ ಭಜಕ ಬಾಂಧವರಿಂದ ಕೊಡ ಮಾಡಲ್ಪಟ್ಟ ರಜತ ಸಿಂಹಾಸನವನ್ನು 13ರಂದು ಶ್ರೀದೇವರಿಗೆ ಸಮರ್ಪಿಸಲಾಗುತ್ತದೆ. 11ರಂದು ಸಂಜೆ 4 ಗಂಟೆಗೆ ನೂತನ ರಜತ ಸಿಂಹಾಸನವನ್ನು ಕುಂಭಾಶಿ ಗಣೇಶ ಪ್ರಭು ಅವರ ನಿವಾಸದಿಂದ ಕೋಟೇಶ್ವರ, ಕುಂದಾಪುರ ಪೇಟೆ ಮಾರ್ಗವಾಗಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಗುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com