ಬೈಂದೂರು:ಮಯ್ಯಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮನ್ನು ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ನೆರವೇರಿಸಿದರು.
ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ರಾಮಕ್ಷತ್ರಿಯ ಸಮಾಜ ಗೌರವಾಧ್ಯಕ್ಷರ ಬಿ. ರಾಮಕೃಷ್ಣ ಶೇರುಗಾರ, ಉದ್ಯಮಿ ಜಯಂತಿ ನಾರಾಯಣ ರಾವ್, ಉದ್ಯಮಿ ನಾಗರಾಜ ಶೇಟ್ ಗದ್ದೆಮನೆ ಮಯ್ಯಾಡಿ, ಪುತ್ತೂರು ಉಪನೋಂದಣಾಧಿಕಾರಿ ಎಂ. ಪರಮೇಶ್ವರ ಕುಂದಾಪುರ ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಸುರೇಶ ಬೆಟ್ಟಿನ್, ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಹನುಮಂತ ಬೆಳ್ಕಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ, ಉದ್ಯಮಿ ರವೀಂದ್ರ ಗಂಗೊಳ್ಳಿ, ಬೈಂದೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಗಾಣಿಗ, ಉಪಾಧ್ಯಕ್ಷ ವೆಂಕಟೇಶ ಪೂಜಾರಿ, ವಸಂತ ಕುಮಾರ ಶೆಟ್ಟಿ ಕಾರಿಕಟ್ಟೆ ಮಯ್ಯಾಡಿ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಮದ್ದೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಗುಡೇಮನೆ, ಉಪಾಧ್ಯಕ್ಷ ಜಿ. ಮಂಜುನಾಥ ಸೂರ್ಕುಂದ ಉಪಸ್ಥಿತರಿದ್ದರು. ಎನ್. ವಿಶ್ವೇಶ್ವರಯ್ಯ, ರವಿರಾಜ ಡಿ, ಗೋವಿಂದರಾಯ ಮಂಡಿಸಿದರು.
ಕಾರ್ಯಾಧ್ಯಕ್ಷ ಕೃಷ್ಣಯ್ಯ ಮದ್ದೋಡಿ ಸ್ವಾಗತಿಸಿದರು. ಬಂಗ್ಲೆ ನಾಗರಾಜ ವರದಿ, ಸಂದೇಶ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಆನಂದ ಮದ್ದೋಡಿ ಕಾರ್ಯಕ್ರಮ ನಿರ್ವಹಿಸಿ ಪ್ರಧಾನ ಕಾರ್ಯದರ್ಶಿ ಹನುಮಂತ ಜಿ. ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com