ರಾಷ್ಟ್ರೀಯ ಮತದಾರರ ದಿನಾಚರಣೆ


ಬಂಟ್ವಾಡಿ:   ರಾಜಕೀಯ ವ್ಯವಸ್ಥೆಯ ಭ್ರಷ್ಟತೆಯನ್ನು ಹೊಡೆದೋಡಿಸಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡುವಲ್ಲಿ ಪ್ರಜ್ಞಾವಂತ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಣವನ್ನು ಪಡೆದುಕೊಂಡು ಮತ ನೀಡುವ ಕೆಟ್ಟ ವ್ಯವಸ್ಥೆಗೆ ಬಲಿಯಾಗುವ ಮತದಾರರು ಜಾಗೃತರಾಗದ ಹೊರತು ಸುಭದ್ರ ಹಾಗೂ ಉತ್ತಮವಾದ ಪ್ರಜಾಪ್ರತಿನಿಧಿ ವ್ಯವಸ್ಥೆ ನಿಮರ್ಾಣ ಸಾಧ್ಯವಿಲ್ಲ ಎಂದು ಸೇನಾಪುರ ಗ್ರಾಮೀಣ ರೋಟರಿ ದಳದ ಅಧ್ಯಕ್ಷ ನಾಗೇಂದ್ರಕುಮಾರ್ ಅವರು ಹೇಳಿದರು.
        ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಜರಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಬಂಟ್ವಾಡಿ ಗ್ರಾಮದ 35 ಮತದಾರರಿಗೆ ಗುರುತುಪತ್ರವನ್ನು ಅವರು ವಿತರಿಸಿದರು. 
     ಮುಖ್ಯ ಅತಿಥಿ ಗ್ರಾಮ ಪಂಚಾಯತ್ ಸದಸ್ಯ ರಾಜೀವ ಶೆಟ್ಟಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ರೋಟರಿ ಗ್ರಾಮೀಣ ದಳದ ಪ್ರಶಾಂತ ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡವರಿಗೆ ಪ್ರತೀಜ್ಞಾವಿಧಿಯನ್ನು ಬೋಧಿಸಲಾಯಿತು.
   ಮುಖ್ಯಶಿಕ್ಷಕ ನಾಗೇಶ್ ಶ್ಯಾನುಭಾಗ್ ಅವರು ಸ್ವಾಗತಿಸಿದರು. ಸಹಶಿಕ್ಷಕ, ಬ್ಲಾಕ್ ಮಟ್ಟದ ಚುನಾವಣಾಧಿಕಾರಿ ಪ್ರಭಾಕರ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com