ಉಡುಪಿ ಜಿಲ್ಲಾ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳ ಅಧ್ಯಕ್ಷರಾಗಿ ತೃಪ್ತಿ ಕೆ.ಆರ್ ಆಯ್ಕೆ

ಉಡುಪಿ: ಕಾಪುವಿನ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜ.20ರಂದು ನಡೆಯಲಿ ರುವ ಜಿಲ್ಲಾಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತೃಪ್ತಿ ಕೆ.ಆರ್. ಆಯ್ಕೆಯಾಗಿದ್ದಾರೆ.
      ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿ ತೃಪ್ತಿ ಕೆ.ಆರ್. ತನ್ನ ಬಹುಮುಖ ಪ್ರತಿಭೆಯಿಂದ ಸಾಹಿತ್ಯ, ಸಂಗೀತ, ಭರತನಾಟ್ಯ, ಚಿತ್ರಕಲೆ ಗಳಂತಹ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಮಟ್ಟದ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 
        ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿರುವಾಗಲೇ ನೃತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಮಗಳು ಹೊಂದಿದ ಆಸಕ್ತಿಯನ್ನು ಗುರುತಿಸಿ ಪ್ರೊತ್ಸಾಹಿಸಿದವರು ಅಧ್ಯಾಪಕರಾಗಿರುವ ತಂದೆ ರಾಮದೇವ ಕಾರಂತ್ ಮತ್ತು ತಾಯಿ ವಸಂತಿ. ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಶಾಸ್ತ್ರೀಯ ಅಧ್ಯಯನ, ಅಧ್ಯಾಪಕರ ಮಾರ್ಗದರ್ಶನಗಳೊಂದಿಗೆ ಅವಕಾಶಗಳನ್ನೆಲ್ಲ ಬಳಸಿಕೊಳ್ಳ ಬೇಕೆಂಬ ಉತ್ಸಾಹದಿಂದ ಸಾಧಿಸಿದ್ದು ಅಪಾರ. ವಿಜ್ಞಾನ ವಿಚಾರಗೋಷ್ಠಿಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿರುವ ತೃಪ್ತಿ ಕೆ.ಆರ್. ಇನ್‌ಸ್ಪೈರ್ ಅವಾರ್ಡ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ, 2010-11ರಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾದ ಸಾಧನೆ ಮಾಡಿದ್ದಾರೆ. 2009-10ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ದ್ವಿತೀಯ ಪ್ರಶಸ್ತಿ, 2010-11ರಲ್ಲಿ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದ ಯುವ ವಿಜ್ಞಾನಿ ಪ್ರಥಮ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದದ್ದಾರೆ.

ಸಾಧನೆಗಳು
* ಪರಿಸರದ ಸಂಘಸಂಸ್ಥೆಗಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಕನ್ನಡ ಕಂಠಪಾಠ, ಸಂಸ್ಕೃತ ಧಾರ್ಮಿಕ ಪಠಣ, ಜಾನಪದ ಗೀತೆಗಳು, ಶಾಸ್ತ್ರೀಯ ಸಂಗೀತ ಹಾಗೂ ಲಘು ಸಂಗೀತಗಳಲ್ಲಿ ಬಹುಮಾನ.ಸಾಲಿಗ್ರಾಮ ಮಕ್ಕಳ ಮೇಳದ ಶ್ರೀಧರ ಹಂದೆಯವರಿಂದ ಗಮಕ ವಾಚನದಲ್ಲಿ ಪರಿಣಿತಿ ಪಡೆದಿರುವ ತಪ್ತಿ, ಕೋಟದಲ್ಲಿ ನಡೆದ ಮಕ್ಕಳ ಧ್ವನಿಯಲ್ಲಿ ತನ್ನ ಸಂಗಡಿಗರ ಜತೆ ಗಮಕ ಸಂವಾದ ನಡೆಸಿಕೊಟ್ಟಿದ್ದರು.

ಗುರು ರಾಮಚಂದ್ರ ಐತಾಳರ ಮಾರ್ಗದರ್ಶನದಲ್ಲಿ ಯಕ್ಷಗಾನ ಭಾಗವತಿಕೆ.ಯು ಚಾನೆಲ್ ನಡೆಸಿದ ‘ಮನತುಂಬಿ ಹಾಡುವೆನು’ ಮತ್ತು ಉದಯ ಟಿ.ವಿಯವರ ‘ಅಕ್ಷರಮಾಲೆ’ಯಲ್ಲಿ ಪ್ರಥಮ ಸ್ಥಾನ.ಜಲವರ್ಣ ಮಾಧ್ಯಮದಲ್ಲಿ ಭಾವಗಳಿಗೆ ಬಣ್ಣ ತುಂಬುವ ತಪ್ತಿಯ ಕುಂಚದಲ್ಲಿ ಅರಳಿದ ನೂರಾರು ಚಿತ್ರಗಳು ಅರಳಿವೆ. ‘ಕಾಂಬಾ 2010′ರಲ್ಲಿ ಆಕೆ ನಡೆಸಿಕೊಟ್ಟ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ.

74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ನಡೆಸಿದ ಚಿತ್ರಕಲಾ ಸ್ಪರ್ಧೆಗಳಲ್ಲಿ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಪ್ರಥಮ ಸ್ಥಾನ.
2010ರ ಉಡುಪಿ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ, 2010-11ನೇ ಸಾಲಿನ ಜಿಲ್ಲಾಮಟ್ಟದ ಕಲಾಶ್ರೀ ಪ್ರಶಸ್ತಿ, 2008ರ ಮೆರಿಟ್ ಪ್ರಶಸ್ತಿ ಹಾಗೂ 2009ರ ಚಿಗುರು ಕಲಾಪ್ರಶಸ್ತಿ.

2009ರಲ್ಲಿ ಅವರ ‘ನವಿಲುಗರಿ’ ಕವನ ಸಂಕಲನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಬಹುಮಾನ.
ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಶಿಕ್ಷಣ ಮತ್ತು ಸಂಸ್ಕೃತಿ ಗೋಷ್ಠಿ, ಉಡುಪಿಯಲ್ಲಿ ನಡೆದ ‘ಮಕ್ಕಳ ಧ್ವನಿ’ಯ ಕವಿಗೋಷ್ಠಿ, ಕೋಟದಲ್ಲಿ ನಡೆದ ‘ಮಕ್ಕಳ ಧ್ವನಿ’ ಕಥಾಗೋಷ್ಠಿ, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ನಡೆಸಿದ ‘ಮಕ್ಕಳ ಸಂಭ್ರಮ’, ಪಾರಂಪಳ್ಳಿಯಲ್ಲಿ ನಡೆದ ಪ್ರೌಢ ಮಕ್ಕಳ ಸಾಹಿತ್ಯ ಸಮ್ಮೇಳನ, ವಿದ್ಯಾನಿಧಿ ಸಮಿತಿ, ಪುತ್ತೂರು, ಉಡುಪಿ ಇವರು ನಡೆಸಿದ ‘ಸಾಹಿತ್ಯ ಸಲ್ಲಾಪ’ಗಳ ಅಧ್ಯಕ್ಷತೆ.

2011ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 604 ಅಂಕಗಳನ್ನು ಪಡೆದು ಕನ್ನಡ ಅಭಿವದ್ಧಿ ಪ್ರಾಧಿಕಾರದ ಬಹುಮಾನ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com