ಪ್ರಕೃತಿಯ ವೈಚಿತ್ರ್ಯ: ಕರುವಿಗೆ ಮೂರೇ ಕಾಲು

ಕುಂದಾಪುರ: ಇಲ್ಲಿನ ಮೊಳಹಳ್ಳಿ ಗ್ರಾಮದಲ್ಲಿ ಜನಿಸಿರುವ ಮೂರು ಕಾಲಿನ ದನದ ಕರುವೊಂದು ಉರಿನವರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು. ಅದು ತನ್ನ ಮೂರೇ ಕಾಲಿನಲ್ಲಿ ಮಾಡುತ್ತಿರುವ ಸರ್ಕಸ್ ನೋಡಲು ನೂರಾರು ಜನ  ಧಾಮಿಸುತ್ತಿದ್ದಾರೆ.
    ಇಲ್ಲಿನ ನಾರಾಯಣ ಕುಲಾಲ ಎಂಬವರ ಮನೆಯ ಸಾಕುದನ ಗೌರಿ ಹಡೆದ ಈ ಗಂಡು ಕರುವಿಗೆ ಮೂರು ಕಾಲುಗಳಿದ್ದರೂ ದೇಹ ಸಮರ್ಪಕವಾಗಿ ಬೆಳೆದಿದ್ದು, ಎದುರಿನ ಎಡಭಾಗದ ಕಾಲು ಮನುಷ್ಯನ ಕೈಬೆರಳಿನಷ್ಟು ಉದ್ದವಿದೆ. ಹದಿನೈದು ದಿನಗಳ ಹಿಂದೇಯೆ ಜನಿಸಿರುವ ಕರು ಆರೋಗ್ಯವಂತಾಗಿದೆ.  ಗೌರಿ ಈ ತನಕ 8 ಕರುಗಳಿಗೆ ಜನ್ಮ ನೀಡಿದ್ದು 9ನೇಯ ಕರುವಿಗೆ ಮೂರೇ ಕಾಲುಗಳಿರುವುದು ನಮಗೆ ಆಶ್ಷರ್ಯವನ್ನುಂಟುಮಾಡಿದೆ ಎಂದು ನಾರಾಯಣ ಕುಲಾಲ ಹೇಳುತ್ತಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com