ತಗ್ಗರ್ಸೆ ಸರಕಾರಿ ಪ್ರೌಢಶಾಲೆ ಮಂಜೂರಾತಿಗೆ ಯತ್ನ; ಶಾಸಕ ಕೆ. ಲಕ್ಷ್ಮೀನಾರಾಯಣಬೈಂದೂರು:  ಬೈಂದೂರು ವಲಯದ ತಗ್ಗರ್ಸೆ ಸುತ್ತರಮುತ್ತಲಿನ ಗ್ರಾಮೀಣ ಮಕ್ಕಳ ಮಾಧ್ಯಮಿಕ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಪ್ರೌಢಶಾಲೆಯ ಮಂಜೂರಾತಿಗೆ ಪ್ರಯತ್ನವನ್ನು ನಡೆಸುವುದಾಗಿ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ಅವರು ಹೇಳಿದ್ದಾರೆ.
       ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಜರಗಿದ ಸಂಭ್ರಮ ನಮ್ಮೂರ ಶಾಲಾ ಹಬ್ಬ-ಬಣ್ಣಭಾವಗಳ ಒಡ್ಡೋಲಗ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅವರು ಮಾತನಾಡಿದರು. ಶಾಲಾ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿಯವರ ಮನವಿಯನ್ನು ಸ್ವೀಕರಿಸಿದ ಮಾತನಾಡಿದ ಶಾಸಕರು, ಶಿಕ್ಷಣದ ಗುಣಾತ್ಮಕತೆಯನ್ನು ಆಯ್ದುಕೊಳ್ಳಲು ಹಾಗೂ ಅದನ್ನು ವಧರ್ಿಸಲು ಕ್ಷೇತ್ರದ ಜನಪ್ರತಿನಿಧಿಗಳು ಸದಾ ಸಿದ್ಧರಿದ್ದು, ಮೂಲಸೌಕರ್ಯ ಬೇಡಿಕೆ ಸೇರಿದಂತೆ ಸರಕಾರಿ ಶಾಲೆಗಳ ಬೆಳವಣಿಗೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಜಾನಪದ ಪರಿಷತ್ ಕುಂದಾಪುರ ಘಟಕ ಸಹಕಾರದೊಂದಿಗೆ ಶಾಲೆಯಲ್ಲಿ ನಡೆದ ಜಾನಪದ ವಸ್ತಪ್ರದರ್ಶನವನ್ನು ಈ ಸಂದರ್ಭದಲ್ಲಿ ಅವರು ಉದ್ಘಾಟಿಸಿದರು.
           ಮುಖ್ಯ ಅತಿಥಿ ಉದ್ಯಮಿ ತಗ್ಗರ್ಸೆ ನಾರಾಯಣ ಹೆಗ್ಡೆ ಅವರು ಸಮಾರಂಭವನ್ನು ಉದ್ಘಾಟಿಸಿದರು. ಶಿವಮೊಗ್ಗದ ಉದ್ಯಮಿ ಮಂಜುನಾಥ ಹುಳುವಾಡಿ ಅವರು ಸ್ವಸ್ತಿವಾಚನಗೈದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ಬೈಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಗಾಣಿಗ, ಉಪಾಧ್ಯಕ್ಷ ವೆಂಕ್ಟ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷ ಟಿ. ರಾಜು ಹುದಾರ್, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತ್ಯನಾ ಕೊಡೇರಿ, ಸಮೂಹ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ, ವಿದ್ಯಾಥರ್ಿ ನಾಯಕ ಆನಂದ ಮೊದಲಾದವರು ಉಪಸ್ಥಿತರಿದ್ದರು.
        ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣಪತಿ ಹೋಬಳಿದಾರ್, ನಿವೃತ್ತ ವನಪಾಲಕ ಸೀತಾರಾಮ ಎಂ. ಪಿ., ದಾನಿ ಹಾಡಿಮನೆ ಪರಮೇಶ್ವರ ಪೂಜಾರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
       ಮುಖ್ಯಶಿಕ್ಷಕ ಸಂಜೀವ ನಾಗೂರು ಸ್ವಾಗತಿಸಿದರು. ಸಹಶಿಕ್ಷಕಿ ಸಂಗೀತಾ ಶಾಲಾ ವರದಿವಾಚಿಸಿದರು. ಗೌರವಶಿಕ್ಷಕಿ ಚೈತ್ರ ಸಂದೇಶವಾಚಿಸಿದರು. ಸಹಶಿಕ್ಷಕಿಯರಾದ ಭಾಗೀರಥಿ ಮತ್ತು ಅಂಬಾಬಾಯಿ ಅವರು ಬಹುಮಾನಿತ ವಿದ್ಯಾಥರ್ಿಗಳ ಪಟ್ಟಿಯನ್ನು ವಾಚಿಸಿದರು. ಸಹಶಿಕ್ಷಕಿ ಜ್ಯೋತಿ ಎಚ್. ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ನಾಗರತ್ನ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com