ಕುಂದಾಪುರ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಕುಂದಾಪುರ ವತಿಯಿಂದ ಕುಂದಾಪುರ ತಾಲೂಕು ಮಟ್ಟದ ರ್ಯಾಲಿ ಹಾಗೂ ಕಬ್ಸ್ ಮತ್ತು ಬುಲ್ ಬುಲ್ ಉತ್ಸವ ಕುಂದಾಪುರದಲ್ಲಿ ನಡೆಯಿತು.
ಇಲ್ಲಿನ ವೆಂಕಟರಮಣ ಆಗ್ಲಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಪುರಸಭಾಧ್ಯಕ್ಷ ಮೋಹನದಾಸ ಶೈಣೈ ವಿದ್ಯಾಭ್ಯಾಸದೊಂದಿಗೆ ಶಿಸ್ತು ಸಂಯಮ ದೇಶಭಕ್ತಿ ಸಮಯಪ್ರಜ್ನೆ ಹಾಗೂ ಸಾಹಸಗಳನ್ನು ಮೈಗೂಡಿಸಿಕೊಂಡಾಗ ಮಕ್ಕಳು ಸತ್ಪ್ರಜೆಗಳಾಗಲು ಸಾದ್ಯವಿದೆ. ಈ ವ್ಯವಸ್ಥೆಯನ್ನು ಸ್ಕೌಟ್ ಗೈಡ್ಸ್ ಮೂಲಕ ಮಕ್ಕಳಿಗೆ ನೀಡುತ್ತಿದ್ದು ಈ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಸತೀಶ್ ಶೆಟ್ಟಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಚಿತ್ರಾ, ವೆಂಕಟರಮಣ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ, ನೀತಾ ಪೈ, ಜಿಲ್ಲಾ ಪ್ರತಿನಿಧಿ ಪ್ರಭಾಕರ ಭಟ್, ಕೊಗ್ಗ ಕಾಮತ್, ರ್ಯಾಲಿ ನೇತೃತ್ವ ವಹಿಸಿದ್ದ ಸುಬ್ರಮಣ್ಯ ಗಾಣಿಗ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಆನಂದ ಪೂಜಾರಿ, ಹಾಗೂ ದಿನಕರ ಪಟೇಲ್, ಕೆ.ಆರ್.ನಾಯಕ್, ಮನೋಜ ನಾಯರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂಧಿಸಲಾಯಿತು.
ಸ್ಕೌಟ್ ಅಧಿಕಾರಿ ಪದ್ಮನಾಭ ಸ್ವಾಗತಿಸಿ, ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲುತಾಲೂಕು ಮಟ್ಟದ ಬ್ರಹತ್ ಸ್ಕೌಟ್ ಗೈಡ್ಸ್ ರ್ಯಾಲಿ ಕುಂದಾಪುರ ಪೇಟೆಯ ವಿವಿದೆಡೆ ಸಂಚರಿಸಿತು. ತಾಲೂಕಿನ ಸುಮಾರೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.