ಓದಿನಿಂದ ವಿಮರ್ಶಾತ್ಮಕ ಗುಣ ಹೆಚ್ಚುವುದು: ಉಪೇಂದ್ರ ಸೋಮಾಯಾಜಿ

ಕುಂದಾಪುರ: `ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ವಿಮರ್ಶಾತ್ಮಕ ಗುಣಗಳು ನಮ್ಮಲ್ಲಿ ಬೆಳೆಯುತ್ತದೆ. ಸಮಾಜದ ಆಗುಹೋಗುಗಳ ಕುರಿತು ಚಿಂತಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಸಿ.ಉಪೇಂದ್ರ ಸೋಮಯಾಜಿ ಅವರು ಹೇಳಿದರು.
          ಇಲ್ಲಿನ  ಭಂಡಾರ್‌ಕಾರ್ಸ್‌  ಕಾಲೇಜಿನ ಡಾ.ಎಚ್. ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಮಿತ್ರಮಂಡಳಿ, ಕೋಟ ಇವರ ಸಹಭಾಗಿತ್ವದಲ್ಲಿ ಡಾ.ಕೋಟ ಶಿವರಾಮ ಕಾರಂತರ ನೆನಪಿನಲ್ಲಿಸೋಮವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 17ನೇ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
         ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮಂಗಳ ಗಂಗೋತ್ರಿಯ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಶ್ರೇಯಾಂಕ ಎನ್.ರಾನಡೆ ಅವರನ್ನು ಸನ್ಮಾನಿಸಲಾಯಿತು.
  ಭಂಡಾರ್‌ಕಾರ್ಸ್‌  ದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ ದೋಮ ಸ್ವಾಗತಿಸಿದರು. ಡಾ.ಎಚ್.ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಂಚಾಲಕಿ ಪ್ರೊ.ರೇಖಾ ಬನ್ನಾಡಿ ವಂದಿಸಿದರು. ವಿದ್ಯಾರ್ಥಿನಿ ಪ್ರವೀಣಾ ನಿರ್ವಹಿಸಿದರು.
                                                    ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com