ತಾಲೂಕು ಪಂಚಾಯತ್ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಪುರಸಭಾಧ್ಯಕ್ಷ ಮೋಹನದಾಸ ಶೈಣೈ, ಕುಂದಾಪುರ ಉಪವಿಭಾಗ ಪೊಲೀಸ್ ಉಪಾಧೀಕ್ಷಕಿ ಯಶೋದಾ ಎಸ್. ಒಂಟಗೋಡಿ, ವೃತ್ತನಿರೀಕ್ಷಕ ಮಂಜುನಾಥ ಕವರಿ, ಉಪನಿರೀಕ್ಷಕಾರದ ಜಯರಾಮ ಗೌಡ, ಪುರಸಭಾ ಸದಸ್ಯ ರಾಜೇಶ ಕಾವೇರಿ, ಕಸತೀಶ್ ಸೆಟ್ಟಿ, ಪುಷ್ಪಾ ಶೇಟ್, ರೇವತಿ ಮೊದಲಾದವರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವದ ಅಂಗವಾಗಿ ಕುಂದಾಪುರ ಪೊಲೀಸ್ ಹಾಗೂ ವಿವಿಧ ಶಾಲಾ ಕಾಲೇಜುಗಳ ಎಸಿಸಿ, ಎನ್.ಎಸ್.ಎಸ್, ಸ್ಕೌಟ್ಸ-ಗೈಡ್ಸ್, ಸೇವಾದಲದ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಚಿತ್ರಗಳು: ಯೋಗಿಶ್ ಕುಂಭಾಶಿ
ಕುಂದಾಪ್ರ ಡಾಟ್ ಕಾಂ - editor@kundapra.com