ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಮಾತ್ರಮಂಡಳಿಯ 9ನೇ ವರ್ಷದ ವಾರ್ಷಿಕೋತ್ಸವ ಇತ್ತಿಚಿಗೆ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಪ್ರಭಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರಿ ಶ್ವೇತಾ, ಹನುಮಂತ ಬೆಳ್ಳಿ, ಸುರೇಶ ಬಟ್ವಾಡಿ, ಜಯಾನಂದ ಹೋಬಳಿದಾರ್ ಭಾಗವಹಿಸಿದ್ದರು, ಮಾತೃ ಮಂಡಳಿಯ ಅಧ್ಯಕ್ಷೆ ಆಶಾ ಕಿಶೋರ್ ಮತ್ತು ಕಾರ್ಯದರ್ಶಿ ಆಶಾ ದಿನೇಶ್ ಉಪಸ್ಥಿತರಿದ್ದರು. ಲಲಿತಾ ಕೇಶವ ನಾಯ್ಕ ಕಾರ್ಯಕ್ರಮ ನಿರೂಪಿಸಿ ಪಾರ್ವತಿ ಸತ್ಯನಾರಾಯಣ ವಂದಿಸಿದರು.
ಬೆಳಿಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ಕುಂದಾಪ್ರ ಡಾಟ್ ಕಾಂ - editor@kundapra.com