ದೇಹ ಶುದ್ಧಿಗಿಂತ ಮನಃಶುದ್ಧಿ ಮುಖ್ಯ: ಸಂತೋಷ ಗುರೂಜಿ

ಕಾಲ್ತೋಡು:`ನಾವು ಪಂಚಭೂತಗಳಲ್ಲಿ ದೇವರನ್ನು ಕಾಣುತ್ತೇವೆ. ಪಂಚಭೂತಗಳಾದ ಭೂಮಿ, ಆಕಾಶ, ಅಗ್ನಿ, ಜಲ, ವಾಯುವನ್ನು ಎಲ್ಲರೂ ಸಮನಾಗಿ ಅನುಭವಿಸುತ್ತಾರೆ. ಆದ್ದರಿಂದ ಭಗವಂತನಲ್ಲೂ ತಾರತಮ್ಯ ಭಾವ ಇರಲು ಸಾಧ್ಯವಿಲ್ಲ. ದೇವರ ಮುಂದೆ ಎಲ್ಲರೂ ಒಂದೇ. ವಿವಿಧ ಅಂತರಗಳು ಮನುಷ್ಯ ಸೃಷ್ಟಿ' ಎಂದು ಬೆಂಗಳೂರಿನ ಆಯುರಾಶ್ರಮದ ಸಂತೋಷ ಗುರೂಜಿ ಹೇಳಿದರು.
     ಕಾಲ್ತೋಡಿನ ಮಹಾಲಸಾ ಮಾರಿಕಾಂಬಾ ದೇವಸ್ಥಾನದ ನವೀಕೃತ ಗರ್ಭಗುಡಿಯಲ್ಲಿ ದೇವಿಯ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
    ದೇವರ ಮೇಲಿನ ನಂಬಿಕೆ ದೃಢವಾಗಿ ರಬೇಕು. ಆ ಕುರಿತಾದ ಮನಸ್ಸಿನ ಹೊಯ್ದಾಟ ದೈವ ವಂಚನೆಗೆ ಸಮ. ದೇವರನ್ನು ನಂಬುವುದಾದರೆ ಪೂರ್ಣವಾಗಿ ನಂಬಬೇಕು. ದೇವರ ಬಳಿ ಹೋಗುವಾಗ ದೇಹ ಶುದ್ಧಿಗಿಂತ ಮನಃ ಶುದ್ಧಿ ಹೆಚ್ಚಾಗಿ ಹೊಂದಿರಬೇಕು ಎಂದು ಅವರು ಹೇಳಿದರು. 
     ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುಖಾನಂದ ಶೆಟ್ಟಿ, ಕೆ.ಸದಾಶಿವ ಶೆಟ್ಟಿ, ವಾಜುರಾಜ ಶೆಟ್ಟಿ, ಚಂದ್ರಶೇಖರ ಗಾಣಿಗ, ವಿಜಯ ಕುಮಾರ ಶೆಟ್ಟಿ, ಚಿಕ್ಕಯ್ಯ ಶೆಟ್ಟಿ, ಉದಯ ಆಚಾರ್ಯ, ಎಸ್. ಜನಾರ್ದನ ಅತಿಥಿಗಳಾಗಿದ್ದರು.
     ದೇವಸ್ಥಾನದ ರೂವಾರಿ ರಾಮಯ್ಯ ಅರ್ಚಕ, ದಾನಿಗಳಾದ ಎಚ್. ಜಯಶೀಲ ಶೆಟ್ಟಿ, ವಿಜಯಕುಮಾರ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ವಾಜುರಾಜ ಶೆಟ್ಟಿ, ಸದಾಶಿವ ಶೆಟ್ಟಿ, ಬಾಬು ರಾವ್, ಚಂದ್ರಶೇಖರ ಗಾಣಿಗ, ಚಿಕ್ಕಯ್ಯ ಶೆಟ್ಟಿ, ಉದಯ ಆಚಾರ್ಯ, ನಾರಾಯಣ ಶೆಟ್ಟಿ, ಮಂಜಯ್ಯ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗಣೇಶ ಶೆಟ್ಟಿ, ಕರುಣಾಕರ ಶೆಟ್ಟಿ, ರತ್ನಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರದೀಪಕುಮಾರ ಶೆಟ್ಟಿ ಸ್ವಾಗತಿಸಿದರು. ಮಂಜಯ್ಯ ಶೆಟ್ಟಿ ವಂದಿಸಿದರು. ಶಿಕ್ಷಕ ಕೆ.ಕರುಣಾಕರ ಶೆಟ್ಟಿ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com